Friday, June 21, 2013

ನನ್ನ ವಿಷ್ಣುವರ್ಧನ್



೧೯೮೨ರಲ್ಲಿ ಬಂದ ಜಿಮ್ಮಿ ಗಲ್ಲು ಚಿತ್ರದ ಹಾಡಿದು, ಈ ಹಾಡು, ವಿಷ್ಣುವರ್ಧನ್ ಹಾಡಿದ್ದು ಅನ್ನುವ ಕಾರಣಕ್ಕೆ ನನಗೆ ಆಪ್ತವೆನಿಸುತ್ತೋ ಗೊತ್ತಿಲ್ಲ. ಅವರನ್ನು ಬಾಲ್ಯದಿಂದಲೂ ಅತೀವ ಇಷ್ಟಪಡುವ ನನಗೆ ಅವರ ಈ ಹಾಡು ನಾಸ್ತಾಲಾಜಿಕ್. ಅದರಲ್ಲಿ ಬರುವ ಚೆಂದದ ನಾಯಿಯೂ ಇಷ್ಟ.

https://www.youtube.com/watch?v=cvN62cvR1sM

ಕನ್ನಡದಲ್ಲಿ ಬಂದು ಹೋದ ಚೆಂದದ ನಟರಲ್ಲಿ ಒಬ್ಬರು. ಅವರ ಬಟ್ಟೆ, ಕಲರ್ ಸೆನ್ಸ್ ಕೂಡಾ ತುಂಬಾ ಚೆಂದ. ಅವರು ಹಾಕುತ್ತಿದ ಕಡ, ಎಡಗೈಯನ್ನು ಫೈಟ್ ಗೆ ಬಳಸುತ್ತಿದ್ದ ರೀತಿ ತುಂಬಾ ಬೇರೆಯದೇ ಅನಿಸಿತ್ತು ಅವಾಗೆಲ್ಲಾ. 

ಸಾಮಾನ್ಯವಾಗಿ ಚಿತ್ರ ನೋಡುತ್ತೇನೆ, ಆದರೆ ಅಭಿನಯಿಸಿದವರ ಬಗ್ಗೆ ನನಗೆ ಅಷ್ಟು ಅಟ್ಯಾಚ್ಮೆಂಟ್ ಬೆಳೆಯುವುದಿಲ್ಲ. ಆದರೆ ವಿಷ್ಣುವರ್ಧನ್ ಬಗ್ಗೆ ಅದೇಕೋ  ಹೇಳಲಾಗದ ಅಭಿಮಾನ,ಪ್ರೀತಿ. ನಾನು ನಮ್ಮದೇ ಮನೆಯ ಒಬ್ಬರಂತೆ ಹಚ್ಚಿಕೊಂಡ ಏಕೈಕ ನಟ.  

(ಚಿತ್ರ ಕೃಪೆ: ಅಂತರ್ಜಾಲ)

ಅವರು ಪ್ರಪಂಚದ ಯಾವುದೋ ಮೂಲೆಯಲ್ಲಿದ್ದಾರೆ ಅಂದುಕೊಳ್ಳುವ ನನಗೆ ಅವರ ಚಿತ್ರಗಳಲ್ಲಿ ‘ಸುಪ್ರಭಾತ’, ‘ಲಾಲಿ’ ‘ಮುತ್ತಿನ ಹಾರ’ ‘ಮದುವೆ ಮಾಡಿ ನೋಡು’ ಮತ್ತು ಮಾಲ್ಗುಡಿ ಸರಣಿಯಲ್ಲಿ ಅವರು ನಟಿಸಿದ ಒಂದು ಕಂತು ತುಂಬಾ ಇಷ್ಟ, ಆಪ್ತವೆನಿಸುತ್ತದೆ. ‘ಲಾಲಿ’ಯಂತೂ ಪ್ರತೀಸಲ ನನ್ನ ಕಣ್ಣಲ್ಲಿ ನೀರು ತರಿಸುತ್ತದೆ.ಅವರು ಹಾಡಿರುವ ಎಲ್ಲ ಹಾಡುಗಳೂ ನಂಗಿಷ್ಟ. 

ಜೀವನದಲ್ಲಿ ಅವರನ್ನು ನೋಡಬೇಕು ಅನಿಸಿದ್ದು ಕೈಗೂಡಲೇ ಇಲ್ಲ.

1 comment:

  1. ನಂಗೂ ಲಾಲಿ ತುಂಬಾ ಇಷ್ಟ...

    ReplyDelete