Thursday, June 27, 2013

ಹಿಂತಿರುಗಿ ನೋಡಿದರೆ ನೆರಳಿಲ್ಲ ಅಲ್ಲಿ
ಅರೆ, ನೆರಳೆಲ್ಲಿ ಮಾಯವಾಯ್ತು?! 
ಹುಡುಕಿದೆ ಒಂದಿಷ್ಟು ಹೊತ್ತು 
ನಗುತ್ತಿದ್ದೀರಿ ನೀವಲ್ಲೇ ನಿಂತು :-) 

Wednesday, June 26, 2013

Thru fort

ನಡೆದಂತೆಲ್ಲ ಸವೆಯುವ ಚಪ್ಪಲಿಗಳು
ಕಿವುಡಾಗುವ ಕಿವಿಗಳು
ದ್ವೇಷಿಸುವ ಮನಗಳು
ಕೊನೆಗೂ ಉಳಿಯುವುದಿಷ್ಟೇ...
ನೀ ನಡೆದರೆ ಒಬ್ಬನೇ

ಬಾಳಬೇಕು ಎಲ್ಲರಲ್ಲೊಂದಾಗಿ
ಅದುವೇ ಜೀವನ 

.........

Sunday, June 23, 2013

ಹೊಳೆದದ್ದು

ಯಾವುದೇ ಕೃತಿಯನ್ನು ಓದುವಾಗ ಒಳಾರ್ಥಗಳು ಒಮ್ಮೆಯೇ ಹೊರ ಹೊಮ್ಮಲಾರವು. ಮತ್ತೆ ಮತ್ತೆ ಓದಬೇಕು. ಮತ್ತಿಷ್ಟು, ಮಗದಿಷ್ಟು, ಮೊಗೆದಷ್ಟೂ  ಚಿಂತನೆಗಳು ಹುಟ್ಟಬೇಕು, ಧಾರೆಯಾಗಿ ಹರಿಯಬೇಕು. ಬಲ್ಲವರಿಂದ ಅರ್ಥಗಳನ್ನು  ಕೇಳಬೇಕು. ನಮ್ಮ ಅರಿವಿಗೆ ನಿಲುಕಿದ ಅರ್ಥಗಳಿಗೂ, ಅವರ ದೃಷ್ಟಿಯಲ್ಲಿರುವ ಅರ್ಥಗಳಿಗೂ ತುಲನೆ ಮಾಡಬೇಕು. ಕೊನೆಗೂ ತನಗೇನು ಬೇಕು ಅದನ್ನು ಮನದಲ್ಲಿಟ್ಟುಕೊಳ್ಳುವ ಸ್ವಾತಂತ್ರ್ಯ ಓದುಗನಿಗಿದ್ದೇ ಇರುತ್ತದೆ. 

ಪ್ರತೀ ಓದಿಗೂ ಹೊಸ ಚಿಂತನೆಗಳು ಹುಟ್ಟಿದರಷ್ಟೇ ಓದು ಸಾರ್ಥಕ. ಬರಹಗಾರನ ಪ್ರಯತ್ನವೂ ಸಾರ್ಥಕ. ಅಲ್ಲವೇ? 

Friday, June 21, 2013

Laura n Jack

ನನ್ನ ವಿಷ್ಣುವರ್ಧನ್೧೯೮೨ರಲ್ಲಿ ಬಂದ ಜಿಮ್ಮಿ ಗಲ್ಲು ಚಿತ್ರದ ಹಾಡಿದು, ಈ ಹಾಡು, ವಿಷ್ಣುವರ್ಧನ್ ಹಾಡಿದ್ದು ಅನ್ನುವ ಕಾರಣಕ್ಕೆ ನನಗೆ ಆಪ್ತವೆನಿಸುತ್ತೋ ಗೊತ್ತಿಲ್ಲ. ಅವರನ್ನು ಬಾಲ್ಯದಿಂದಲೂ ಅತೀವ ಇಷ್ಟಪಡುವ ನನಗೆ ಅವರ ಈ ಹಾಡು ನಾಸ್ತಾಲಾಜಿಕ್. ಅದರಲ್ಲಿ ಬರುವ ಚೆಂದದ ನಾಯಿಯೂ ಇಷ್ಟ.

https://www.youtube.com/watch?v=cvN62cvR1sM

ಕನ್ನಡದಲ್ಲಿ ಬಂದು ಹೋದ ಚೆಂದದ ನಟರಲ್ಲಿ ಒಬ್ಬರು. ಅವರ ಬಟ್ಟೆ, ಕಲರ್ ಸೆನ್ಸ್ ಕೂಡಾ ತುಂಬಾ ಚೆಂದ. ಅವರು ಹಾಕುತ್ತಿದ ಕಡ, ಎಡಗೈಯನ್ನು ಫೈಟ್ ಗೆ ಬಳಸುತ್ತಿದ್ದ ರೀತಿ ತುಂಬಾ ಬೇರೆಯದೇ ಅನಿಸಿತ್ತು ಅವಾಗೆಲ್ಲಾ. 

ಸಾಮಾನ್ಯವಾಗಿ ಚಿತ್ರ ನೋಡುತ್ತೇನೆ, ಆದರೆ ಅಭಿನಯಿಸಿದವರ ಬಗ್ಗೆ ನನಗೆ ಅಷ್ಟು ಅಟ್ಯಾಚ್ಮೆಂಟ್ ಬೆಳೆಯುವುದಿಲ್ಲ. ಆದರೆ ವಿಷ್ಣುವರ್ಧನ್ ಬಗ್ಗೆ ಅದೇಕೋ  ಹೇಳಲಾಗದ ಅಭಿಮಾನ,ಪ್ರೀತಿ. ನಾನು ನಮ್ಮದೇ ಮನೆಯ ಒಬ್ಬರಂತೆ ಹಚ್ಚಿಕೊಂಡ ಏಕೈಕ ನಟ.  

(ಚಿತ್ರ ಕೃಪೆ: ಅಂತರ್ಜಾಲ)

ಅವರು ಪ್ರಪಂಚದ ಯಾವುದೋ ಮೂಲೆಯಲ್ಲಿದ್ದಾರೆ ಅಂದುಕೊಳ್ಳುವ ನನಗೆ ಅವರ ಚಿತ್ರಗಳಲ್ಲಿ ‘ಸುಪ್ರಭಾತ’, ‘ಲಾಲಿ’ ‘ಮುತ್ತಿನ ಹಾರ’ ‘ಮದುವೆ ಮಾಡಿ ನೋಡು’ ಮತ್ತು ಮಾಲ್ಗುಡಿ ಸರಣಿಯಲ್ಲಿ ಅವರು ನಟಿಸಿದ ಒಂದು ಕಂತು ತುಂಬಾ ಇಷ್ಟ, ಆಪ್ತವೆನಿಸುತ್ತದೆ. ‘ಲಾಲಿ’ಯಂತೂ ಪ್ರತೀಸಲ ನನ್ನ ಕಣ್ಣಲ್ಲಿ ನೀರು ತರಿಸುತ್ತದೆ.ಅವರು ಹಾಡಿರುವ ಎಲ್ಲ ಹಾಡುಗಳೂ ನಂಗಿಷ್ಟ. 

ಜೀವನದಲ್ಲಿ ಅವರನ್ನು ನೋಡಬೇಕು ಅನಿಸಿದ್ದು ಕೈಗೂಡಲೇ ಇಲ್ಲ.

Thursday, June 20, 2013

ಪುಟ್ಟನಿಲ್ಲದ ಹೊತ್ತು...ಇದು ನನ್ನೊಬ್ಬಳ ಹಾಡಲ್ಲ, ಪ್ರಪಂಚದ ಎಲ್ಲಾ ತಾಯಂದಿರ ಪಾಡು! ಪ್ಲೇ ಹೋಮ್ ಹೋಗುತ್ತಿದ್ದ ನನ್ನ ಪುಟ್ಟ ಇದೀಗ ಇಡೀ ದಿನದ ಶಾಲೆಗೆ! ಪ್ರತೀ ರಜೆ ಮುಗಿದ ಮೇಲೂ ಅವನನ್ನು ಕಳಿಸಲು ಮತ್ತೆ ಮತ್ತೆ ಒದ್ದಾಟ. ಮಧ್ಯಾಹ್ನ ಬಟ್ಟೆ ಒಗೆಯುವಾಗ, ಅವನ ಬಟ್ಟೆಗಳನ್ನು ನೋಡುವಾಗ, ಊಟ ಮಾಡುವಾಗ, ಅವನದೇ ನೆನಪು. 

ಅಯ್ಯೋ, ಪಾಪು ವಾಗ ನಿದ್ದೆ ಮಾಡ್ತಿದ್ದ ಪಾಪ,
ಬಿಸಿಲಿಗೆ ನಿದ್ದೆ ಬರದೆ ಹೋದಿತೆ?
ಮಧ್ಯಾಹ್ನದ ಊಟ ಮುಗಿಸಿದನೋ ಇಲ್ಲವೋ
ಸರಿಯಾಗಿ ನೀರು ಕುಡಿದನೋ ಕಂದ?

ಇದು ಮೊನ್ನೆ ಮೊನ್ನೆ ತೆಗೆದುಕೊಂಡ ಅಂಗಿ ಚಡ್ಡಿ
ಮತ್ತಿವಾಗಲೇ ಚಿಕ್ಕದಾಯಿತಲ್ಲ
ಎತ್ತರ ಬೆಳೆದಿದ್ದಾನೆ, ಕಳ್ಳ
ಸಧ್ಯ, ಅಜ್ಜಂದಿರ ಹಾಗಾಗದಿದ್ದರೆ ಸಾಕು

ಇದು ಕಳ್ಳನ ಯುನಿಫಾರಮ್ಮು
ಮುದ್ದು ಬಾಬು, ನನ್ನ ಕಣ್ಣೇ ತಾಗುತ್ತೆ
ಇದೋ ಅವನ ಪುಟ್ಟ ಸಾಕ್ಸ್
 ಇದರೊಳಗೆ ಕೆಂಪು ಕೆಂಪು ಮೃದು ಪಾದ
ಅಹ್! ಪುಟ್ಟಣ್ಣ ಮಿಸ್ ಮಾಡ್ತೀನೋ ನಿನ್ನ
 
ಟೈ, ಬೆಲ್ಟ್ ಹಾಕಿ ಹೊರಟವನು
ಏನೋ ಹೊಸತು ಸಾಧಿಸಿದ ಭಾವ
ಹೊಸ ಶೂಸ್, ಬ್ಯಾಡ್ಜ್ ಬೇರೆ
ದೊಡ್ಡವನಾಗಿ ಬಿಟ್ಟಪ್ಪ ಎಷ್ಟು ಬೇಗ

ಬೆಳಗ್ಗೆ ಹೋದವನು ಬರುವುದೇ ಸಂಜೆ ಹೊತ್ತಿಗೆ
ಕರ್ಮವೇ, ಇಷ್ಟು ಪುಟ್ಟ ಮಕ್ಕಳಿಗೆ ಸ್ಕೂಲಾದರೂ ಯಾಕೆ?
ಇವತ್ತು ಅತ್ತಿದ್ದ ಬೆಳಗ್ಗೆ ಬೆಳಗ್ಗೆ ಪಾಪಚ್ಚಿ
ಬುತ್ತಿಗೆ ಅವನಿಷ್ಟದ ಬೆಂಡೆ ಪಲ್ಯ,
ಚಪಾತಿ ಗಟ್ಟಿಯಾಗಿರದಿದ್ದರೆ ಸಾಕಪ್ಪ


 ಬಂದ ಕೂಡಲೇ ನಗು, ಮುದ್ದು
 ಜಡಿ ಮಳೆ ಸುರಿದಂತೆ ಮಾತು
ಮಿಸ್ಡ್ ಯೂ ಅಮ್ಮ, ತುಂಬಾ ನೆನಪು ಬಂತು
ಎಲ್ಲಾ ಮ್ಯಾಮ್ ಗಳು ಅಮ್ಮನಷ್ಟೇ ಚೆಂದವಂತೆ!
 
ಇಂದು ಅವನಿಗಿಷ್ಟದ ಪುಲಾವು
ಅದರೊಂದಿಗೆ ಚೆಂದ ಕಥೆ
 ಮತ್ತೆ ತುಂಬಾ ಆಟ, ಊಟ, ನಿದ್ದೆ
ಅಯ್ಯಬ್ಬ ಇಂದಿಗೆ ನಾ ಗೆದ್ದೆ!
ನಾಳೆಯೂ ಮತ್ತಿದೇ ಕಥೆ
 
ದಿನಗಳೂ, ವಾರಗಳೂ, ತಿಂಗಳೂ
ಯಾಕಪ್ಪ ದೇವರೇ ನಿನಗಿಷ್ಟು ಆತುರ
ಪ್ರತೀ ಗಳಿಗೆಯೂ ನಿಧಾನಕ್ಕೆ ಓಡಿಸಪ್ಪ
ನಮ್ಮೀ ಬದುಕಿನ ಬಂಡಿ
ಪುಟ್ಟ ಇನ್ನಷ್ಟು ಹೊತ್ತು ಮಗುವಾಗಿರಲಿ
 
ಮಧ್ಯಾಹ್ನದ ಊಟಕ್ಕೆ ಯಾರೂ ಇಲ್ಲ ಪಕ್ಕ
ಇದ್ದರೆ ಇರುತಿತ್ತು ಸಣ್ಣ ತಟ್ಟೆ, ಸಣ್ಣ ಮರಿ
ಗಲಾಟೆ ಮಾಡಿ, ಕಥೆ ಹೇಳಿಸಿಕೊಂಡು
ಮೊಸರನ್ನವೂ ಖಾರ ಆಗಿ
 ನೂರು ಸಲ ನೀರು ಕುಡಿದು
ಅಯ್ಯೋ! ದಿನಗಳು ಮತ್ತೆ ಬಾರವಲ್ಲ ?

ಅವನದೇ ಪ್ರಪಂಚ, ಅವನದೇ ಆಟಗಳು
ಅಮ್ಮನಿಲ್ಲವೇ ಇಲ್ಲವಲ್ಲ ಅಲ್ಲಿ
ಕಣ್ಣಿಂದ ಜಾರಿತು ಒಂದು ಹನಿ
ಆದರೆ ತುಟಿಯ ಮೇಲೊಂದು ಸಂತೃಪ್ತ ನಗೆ

ಕಾಲವೇ, ಮತ್ತೆ ತಿರುಗಿ ಬಾರೆ.....

ಪ್ರೀತಿ ಉವಾಚ

ಇತಿ, ಮಿತಿ, ಲೆಕ್ಕಾಚಾರ, ಬುದ್ಧಿವಂತಿಕೆ, ಜಾಣತನ 

ಕ್ಷಮಿಸಿ ಇವೆಲ್ಲಾ ನನ್ನ ನಿಘಂಟಿನಲ್ಲಿಲ್ಲ. 

Wednesday, June 19, 2013

Heege.....

ಬದುಕು

ಕೊನೆಗೂ ಸಂಬಂಧಗಳಿಗೆ ಜೋತು ಬೀಳೋದು


ಕೊನೆಗೂ ಅಷ್ಟೇ... ಪರಿತಪಿಸಿದಷ್ಟೂ ಪರ ವಶವಾಗುವುದು.

Tuesday, June 11, 2013

Friday, June 7, 2013

Ekangi

ಬದುಕು

ಅಳೆದು ಸುರಿದು ಮಾತನಾಡಲು
ರಸಾಯನಶಾಸ್ತ್ರದ ಪ್ರಯೋಗಶಾಲೆಯಲ್ಲ ಇದು
ನನ್ನದೇ ಮಿತಿಗಳನ್ನೊಳಗೊಂಡ ಅಪ್ಪಟ ನನ್ನದೇ ಬದುಕು

Tuesday, June 4, 2013