Monday, September 3, 2012

A try!!!

A try!!! Camel maatra tipparalaga hodedroo shape baralilla. Konege outline trace maadikonde, adoo sari aagilla. Done in procreate, while travelling to Hyderabad.

Friday, August 31, 2012

Wednesday, August 22, 2012

Friday, August 17, 2012

ಸುಮ್ಮನೆ

ಪುಟ್ಟ ಕೇಳುತ್ತಾನೆ...ದಿನವೂ ಬ್ರಷ್ ಮಾಡಲೇ ಬೇಕಾ ಅಮ್ಮಾ???





ಮಳೆ....


Monday, July 30, 2012

ಮನಸ್ಸಿಗೆ ತೋಚಿದ್ದು

ವಿಷಾದ ಗೀತೆಗಿದು ಕಾಲವಲ್ಲ ಗೆಳತಿ
ಇದ್ದದ್ದು ಇದ್ದ ಹಾಗೆಯೇ ಎದುರಿಸಬೇಕು
ಇದುವೇ ಜೀವನ
ನಿನ್ನ ನಂಬಿಹ ಜನರಿಹರು ನಿನ್ನ ಸುತ್ತ
ಅವರಿಗೋಸ್ಕರ ಬದುಕಿ ನೋಡು
ದೇವನಿರುವ ಅನವರತ ನಿನ್ನೊಡನೆ

Love the colors of it!


' Shaadi tumse, kabhi nahi '

ಎಷ್ಟು ಖುಶಿ ಕೊಡುತ್ತೆ ಚಿತ್ರ ಬರೆಯೋದು, ಎಷ್ಟೇ ಸುಸ್ತಾದ್ರೂ ಮನಸ್ಸಿಗೆ ಆರಾಮ ಅನಿಸುತ್ತೆ. 

Thursday, July 26, 2012

Summane


One more

"Amma, this one is last ok ?" Poor kid tired of giving poses!

Tuesday, July 24, 2012

ಮುಗಿದದ್ದು





ಮನದಾಳದಲ್ಲೆಲ್ಲೋ ಅಪಶ್ರುತಿ, ಇದು ನಾ ಕಂಡ ಕನಸಲ್ಲ
ನೀ ನನ್ನ ಕನಸಿನ ಹುಡುಗ ಅಲ್ಲವೇ ಅಲ್ಲ
ನನ್ನ ಕನಸಿನ ಹುಡುಗ ನನ್ನೆಂದೂ ದೂರ ತಳ್ಳಲಾರ
ನನ್ನ ಪ್ರೀತಿಸುವುದ ಬಿಟ್ಟು ಅವಗೇನೂ ತಿಳಿದಿಲ್ಲ
ಕನಸು, ಮನಸಲ್ಲೂ ಅವ ಬೇರೆಯವರ ನೆನಸಲಾರ
ಇಲ್ಲಿ ನಾ ನಿನ್ನ ಎಲ್ಲರೊಂದಿಗೆ ಹಂಚಿಕೊಂಡಿರುವೆ
ನೀ ಬೇರೆಯವರ ಧ್ಯಾನದಲ್ಲಿದ್ದರೂ ನಿನ್ನ ಪ್ರೀತಿಸಿದೆ
ನಿನ್ನೆಲ್ಲಾ ಕನಸುಗಳಿಗೆ ಜೀವ ತುಂಬಿದೆ
ನನ್ನ ಕನಸುಗಳ ಮರೆತೇ ಬಿಟ್ಟೆ
ಮುದ್ದಿನ ಮುದ್ದೆಯಾದವಳು ತಿರಸ್ಕಾರ, ಒರಟು-ಚುಚ್ಚು ಮಾತ ಸಹಿಸಿದೆ
ನನ್ನ ಮೀರಿ ನನ್ನ ಕೊಟ್ಟೆ, ನಿನ್ನ ನಗುವ ಕಾಣಲು ತಹ ತಹಿಸಿದೆ
ಜೀವಕ್ಕಿಂತ ಅಮೂಲ್ಯ ನೀ ನನಗೆ, ಅದರೆ ನಾ ಏನು ನಿನಗೆ ?
ನನ್ನ ನಿಯಮಗಳು, ನನ್ನತನವ ನಾನೇ ಕೈಯಾರೆ ಅಳಿಸಿದೆ
ಇದೂ ನಾನಲ್ಲ, ನನ್ನ ಅಸ್ತಿತ್ವವ ಕಳಕೊಂಡು ಬಿಟ್ಟಿರುವೆ
ಒಂದೇ ಮಾತು ಜೀವದ ಗೆಳೆಯಾ
ನೀ ಎಂದಿಗೂ ಖುಷಿಯಾಗಿರು
ನಿನ್ನ ಮನವೆಲ್ಲಿ ಸಾಂತ್ವನ ಪಡೆಯುತ್ತದೋ ಅಲ್ಲಿ
ನಿನ್ನ ಪ್ರೀತಿಯ ಪಡೆದದ್ದೇ ನನ್ನ ಪುಣ್ಯ, ನಿನ್ನ ಕಾಳಜಿ ಅಮ್ಮನ ಪ್ರೀತಿಯಾಯ್ತು ಎನಗೆ
ಆದರೆ, ನನಗಿನ್ನೂ ಜಾಸ್ತಿ ಬೇಕಿದೆ ಗೆಳೆಯಾ.....
ಇಷ್ಟು ವರುಷಗಳೂ ನಾ ಕಾದಿರಿಸಿದ ಪ್ರ‍ೀತಿ ಕೊನೆಗೂ ಗೆಲ್ಲಲಿಲ್ಲ,
ನಾ ಮತ್ತೆಂದೂ ಚೇತರಿಸಿಕೊಳ್ಳಲಾಗದಂತೆ ಸೋತು ಹೋದೆ
ದೇವಗೆ ಕರುಣೆಯಿದ್ದಲ್ಲಿ ಈ ಜೀವಂತ ಶವದ ಮೆರವಣಿಗೆಯ ನಿಲ್ಲಿಸಲಿ.........

Tuesday, July 3, 2012

ಬೆಳಕಿನ ಹಾದಿಯದು ಮುಂದೆ...


ಮತ್ತದೋ ಆ ತಿರುವಿನಲಿ ಕಾಣುತ್ತಿದೆ ಬೆಳಕು, ಸಾಗಬೇಕಿದೆ ಮುಂದೆ
ಕಳೆದಿಹುದು ಕತ್ತಲ ಗಲಿಬಿಲಿಯ ತಿರುವಿನ ಹಾದಿ, ಹಿಂತಿರುಗಿ ನೋಡದಿರು ಮತ್ತೆ

Monday, July 2, 2012

Wednesday, June 27, 2012

ಪಪ್ಪ ಮತ್ತು ಪುಟ್ಟ. ನಾ ತೆಗೆದ ಫೋಟೋ, ಇಬ್ಬರ ಫೋಸ್ ನೋಡಿ ಹೇಗಿದೆ ?


ಚಿತ್ರ



ನೀರ ಮೇಲಣ ತಟ್ಟೆ

ತಟ್ಟೆಯೊಂದಿಗೆ ಹೂವು
ಈ ಚಿತ್ರ ಬರೆದವರಾರೋ

Tuesday, June 26, 2012

Sunday, June 3, 2012


ಪುಟ್ಟನ ಡ್ರಾಮಾ !
ಇವತ್ತು ’ಅಂಜದ ಗಂಡು ’ ಸಿನಿಮಾ ನೋಡುತ್ತಾ ಇದ್ವಿ, ಅದೇರಿ ಪೀಸ್ ಪೀಸ್!!! ನನ್ನ ಮಗರಾಯ ಕೂಡಾ ಕೂತು ನೋಡಿದ್ದೇ ನೋಡಿದ್ದು. ಅದ್ರಲ್ಲಿ ರವಿಚಂದ್ರನ್ ಹಳ್ಳಿಗೆ ಹೋಗಿ ರಾಗಿಮುದ್ದೆ ತಿನ್ನುವ ಸೀನ್ ಬರುತ್ತೆ. ಅವನು ಅದನ್ನು ಹಣ್ಣಿನ ಥರಾ ತಿಂದು ಏನು ಉಪ್ಪು ಕಾರ ಇಲ್ಲವಲ್ಲ ಅಂತ ಕೇಳ್ತಾನೆ. ಅದಿಕ್ಕೆ ತೂಗುದೀಪ ಶ್ರ‍ೀನಿವಾಸ್ ಖಾರ ಬೇಕಾ ? ಅಂತ ಕೇಳಿ ಹಸಿ ಮೆಣಸಿನಕಾಯಿ ತಿನ್ನಲು ಕೊಡುತ್ತಾನೆ. ಅದನ್ನು ತಿಂದ ರವಿ ಮುಖ ಹೆಂಗಾಗುತ್ತೆ ಗೊತ್ತಲ್ಲ. ನನ್ನ ಪುಟ್ಟನಿಗೆ ತುಂಬಾ ಖುಶ
ಿಯಾಯ್ತು ಆ ಸೀನ್. ತನ್ನ ಪಪ್ಪನ ಹತ್ತಿರ ಹೇಳಿ ಎರೆಡೆರೆಡು ಸಲ ನೋಡಿದ. ಸಂಜೆ ನಮ್ಮ ಮನೆಗೆ ಬಂದ ಅವನ ರಘು ಮಾಮನಿಗೆ ಅದನ್ನು ಹೇಳಿದ್ದು ಹೀಗೆ:" ರಘು ಮಾಮ, ನಾವು ಫಿಮ್ ನೋಡಿದ್ವಿ, ಅದ್ರಲ್ಲಿ ಅವನು ಚಿಕ್ಕು ತಿಂತಾ ಇರ್ತಾನೆ. ಉಪ್ಪು ಇಲ್ಲ, ಖಾರ ಇಲ್ಲ ಅಂತಾನೆ, ಖಾರ ಬೇಕಾ? ತಿನ್ನು ಅಂತ ಕರಿಬೇಸೊಪ್ಪು ಕೊಡ್ತ್ತಾನೆ. ಅದು ತಿಂದು ಅವನು ಊಹೂಂ.....ಅಂತಾ ಅಳ್ತಾನೆ" ಅಂತ. ರಘುಗೆ ಅರ್ಥಾನೇ ಆಗಿಲ್ಲ ಪಾಪ!
ರವಿಚಂದ್ರನ್ ಅಳೋದು ನನ್ನ ಮಗ ತೋರಿಸಿದ್ದು ಹೀಗೆ! :)b

Tuesday, May 8, 2012


ಹಳದಿ-ಕಪ್ಪು ಪಟ್ಟೆಯ ಈ ರಾಣಿ ನನ್ನೊಡನೆ ಹೇಳಿದ್ದಿಷ್ಟು

ನಾನೇ ಹೆಣೆದ ಬಲೆಯು, ಬಲೆಯೊಳು ನಾನು
ಚಿತ್ರ ತೆಗೆಯುವ ಚಪಲಕ್ಕೆ ಸಿಲುಕಿಹೆ ನೀನು
ಬೇಟೆ ಸಿಕ್ಕದೇ ಹಸಿದು ಕಂಗಾಲಾಗಿರುವೆ ನಾನು
ಬಂದೀತು ಕೀಟ, ತೊಲಗಿದರೆ ಇಲ್ಲಿಂದ ನೀನು!

Friday, May 4, 2012

ನನ್ನಿಷ್ಟದ ಹಾಡು, ಅದರ ಅನುವಾದ (ನನಗೆ ತೋಚಿದಂತೆ)
====================================


Hum hain iss pal yahan, Jaane ho kal kahan
Hum miley na miley, Hum rahey na rahey
Rahegi sadaa yahan, Pyar ki ye dastan
Sunenge sadaa jise,Yeh Zameen asmaan

Hum hain iss pal yahan, Jaane ho kal kahan
Hum miley Na miley, Hum rahey na rahey
Rahegi sadaa yahan, Pyar ki ye dastan
Sunenge sadaa jise,Yeh Zameen asmaan

Rang dhal jaate hai, Din badal jaate hai
Raatein so jati hai, Raahen kho jaati hai
Pyar khota nahin, Pyar sota nahin
Pyar dhalta nahin, Haan badalta nahin

Hum hain iss pal yahan, Jaane ho kal kahan
Hum miley Na miley, Hum rahey na rahey
Rahegi sadaa yahan, Pyar ki ye dastan
Sunenge sadaa jise,Yeh Zameen asmaan

Hum jahan aaye hain, Meherbaan saaye hain
Hum yahaan khwaabon ke, karwaan laaye hain
Dhadkane hain jawaan, Ga raha hain samaa
Pighli pighli si hain, Mehki tanhaiyan

Hum hain iss pal yahan, Jaane ho kal kahan
Hum miley Na miley, Hum rahey na rahey
Rahegi sadaa yahan, Pyar ki ye dastan
Sunenge sadaa jise,Yeh Zameen asmaan
==========================================
ಈ ಕ್ಷಣ ಇರುವೆವು ನಾವಿಲ್ಲಿ, ಅರಿಯೆವು ನಾಳೆ ಎಲ್ಲೋ 
ನಮ್ಮ ಮಿಲನವಾಗಲಿ ಇಲ್ಲದಿರಲಿ, ನಾವಿರಲಿ ಇಲ್ಲದಿರಲಿ
ಇಲ್ಲೆಂದೂ ಇರುವುದು ಪ್ರೀತಿಯ ಕಥೆಗಳ ದಾಸ್ತಾನು
ಆಲಿಸುವವು ಎಂದಿಗೂ ಅವನ್ನೆಲ್ಲಾ, ಈ ಭುವಿ-ಆಗಸ

ಬಣ್ಣಗಳು ಮಾಸಿ ಹೋಗುವವು, ದಿನಗಳು ಬದಲಾಗುವವು
ರಾತ್ರಿಗಳೂ ನಿದ್ದೆ ಹೋಗುವವು, ರಸ್ತೆಗಳೂ ಕಳೆದು ಹೋಗುವವು
ಪ್ರೀತಿ ಎಂದೂ ಕಳೆದು ಹೋಗುವುದಿಲ್ಲ, ಪ್ರೀತಿ ಎಂದೂ ನಿದ್ರಿಸುವುದಿಲ್ಲ
ಪ್ರೀತಿ ಎಂದೂ ಮಾಸಿ ಹೋಗುವುದಿಲ್ಲ, ಹೌದು ಬದಲಾಗುವುದೂ ಇಲ್ಲ

ಈ ಕ್ಷಣ ಇರುವೆವು ನಾವಿಲ್ಲಿ, ಅರಿಯೆವು ನಾಳೆ ಎಲ್ಲೋ
ನಮ್ಮ ಮಿಲನವಾಗಲಿ ಇಲ್ಲದಿರಲಿ, ನಾವಿರಲಿ ಇಲ್ಲದಿರಲಿ
ಇಲ್ಲೆಂದೂ ಇರುವುದು ಪ್ರೀತಿಯ ಕಥೆಗಳ ದಾಸ್ತಾನು
ಆಲಿಸುವವು ಎಂದಿಗೂ ಅವನ್ನೆಲ್ಲಾ, ಈ ಭುವಿ-ಆಗಸ

ನಾವೆಲ್ಲಿ ಬಂದಿರುವೆವೋ, ಅದು ಕರುಣೆಯ ನೆಳಲಿಂದ
ನಾವಿಲ್ಲಿ ಕನಸುಗಳ ಬಂಡಿಯ ಹೊತ್ತು ತಂದಿಹೆವು
ಹೃದಯ ಬಡಿತಗಳು ಹೊಸತಿವೆ, ಗಳಿಗೆಗಳೂ ಹಾಡುತಿವೆ
ಕರ-ಕರಗಿದಂತಿದೆ, ಮಧುರ ಏಕಾಂಗಿತನ

ಈ ಕ್ಷಣ ಇರುವೆವು ನಾವಿಲ್ಲಿ, ಅರಿಯೆವು ನಾಳೆ ಎಲ್ಲೋ
ನಮ್ಮ ಮಿಲನವಾಗಲಿ ಇಲ್ಲದಿರಲಿ, ನಾವಿರಲಿ ಇಲ್ಲದಿರಲಿ
ಇಲ್ಲೆಂದೂ ಇರುವುದು ಪ್ರೀತಿಯ ಕಥೆಗಳ ದಾಸ್ತಾನು
ಆಲಿಸುವವು ಎಂದಿಗೂ ಅವನ್ನೆಲ್ಲಾ, ಈ ಭುವಿ-ಆಗಸ

=======================================

Tuesday, April 24, 2012

ನನ್ನ ಅಂದವ ನೀವು ಎಂದಾದರೂ ಕಂಡೀರಾ ?


ನನ್ನ ಅಮ್ಮನಿಗೆ ತುಂಬಾ ನಾಚಿಕೆ, ಮುಟ್ಟ ಹೋದರೆ ಮುದುಡುವಳು
ನನ್ನ, ನನ್ನ ಸೋದರಿಯರ ಜೋಪಾನವಾಗಿ ಕಾಪಾಡುತ್ತಾಳೆ
ಮೈ ತುಂಬಾ ಮುಳ್ಳು ಆಕೆಗೆ, ಚುಚ್ಚಿದರೆ ಉರಿ ಖಾತರಿಯಾಗಿ ನೀಡುತ್ತಾಳೆ
ಪದೇ ಪದೇ ಮುದುಡಿ ಹೋದರೂ ಮತ್ತೆ  ಆಕೆ ನಿಧಾನವಾಗಿ ಏಳುತ್ತಾಳೆ.
ಪ್ರಪಂಚದ ಸ್ತ್ರೀ ಕುಲಕ್ಕೆಲ್ಲಾ ಭರವಸೆಯ ನಗುವ ನೀಡುತ್ತಾಳೆ.


Wednesday, April 18, 2012

ನೋವು ತರುವ ನೆನಪು....

ಈ ಘಟನೆ ಕಳೆದು ವರುಷಗಳು ಉರುಳಿವೆಯಾದರೂ ನನ್ನ ನೆನಪಿನಲ್ಲಿ ಆಚ್ಚೊತ್ತಿದಂತಿದೆ.....ಅದು ರಾತ್ರಿ ೮-೮.೩೦ರ ಸಮಯ, ನಾನು ನನ್ನ ಸ್ನೇಹಿತೆ ಸೀಮಾ ಇಬ್ಬರು ಟ್ಯೂಷನ್ ಮುಗಿಸಿ ಮನೆಗೆಗೆ ಹೊರಟ್ಟಿದ್ದೆವು. ನಾನು ಆಗ ಡಿಗ್ರಿ ಮಾಡುತ್ತಿದೆ..... ನಮ್ಮ ಊರು ಉಡುಪಿ, ಅಲ್ಲಿ ಆವಾಗೆಲ್ಲಾ, ೮ ಘಂಟೆ ಹೊತ್ತಿಗೆಲ್ಲಾ ಜನ ಅಷ್ಟಾಗಿ ಓಡಾಡೋದು ಕಡಿಮೆಯಾಗಿ ಬಿಟ್ಟಿರುತ್ತಿತ್ತು. ನಾವಿಬ್ಬರು ನಮ್ಮದೇ ಮಾತಿನಲ್ಲಿ ಮುಳುಗಿರುತ್ತಿದರಿಂದ ಬೇರೆ ಕಡೆ ಗಮನ ಹರಿಸುತ್ತಲೇ ಇರಲಿಲ್ಲ.ನಾವು ಯಾವಾಗಲು ಒಂದೇ ಬಸ್ಸಿಗೆ ಹತ್ತುತ್ತಿದ್ದರಿಂದ ಓರ್ವ ಭಿಕ್ಷುಕ (ತುಂಬಾ ಅಜ್ಜನಾಗಿದ್ದ) ಯಾವಾಗಲು ಬಂದು ೧-೨ ರೂಪಾಯಿ ತೆಗೆದುಕೊಂಡು ಹೋಗುತ್ತಿದ. ಆ ದಿನ ನಾವು ಓಡಿ ಬಂದರೂ ಯಾವಾಗಲು ಸಿಗುತ್ತಿದ ಬಸ್ ಸಿಗಲಿಲ್ಲ, ಬೇರೆ ಬಸ್ ಹತ್ತಿ ಕುಳಿತೆವು, ಆವಾಗಲೆ ಎಲ್ಲಾ ಸೀಟ್ ಗಳು ಭರ್ತಿಯಾಗಿದ್ದವು. ಅದು ಕೂಡ ಎಲ್ಲಾ ಗಂಡಸರೇ ತುಂಬಿ ಕೊಂಡಿದ್ದರು. ಚಾಲಕನ ಹಿಂಭಾಗದ ಸೀಟ್ ಒಂದೇ ಖಾಲಿ ಇದ್ದದ್ದು, ಸರಿ ಎಂದು ಅದ್ರಲ್ಲಿ ಕುಳಿತು ಮಾತನಾಡಲು ಶುರು ಹಚ್ಚಿಕೊಂಡೆವು. ಬಸ್ ಹೊರಡಲು ಇನ್ನೂ ಸಲ್ಪ ಸಮಯವಿತ್ತು, ಅಷ್ಟರಲ್ಲಿ ಅದೇ ಅಜ್ಜ ಭಿಕ್ಷುಕ ತೂರಾಡುತ್ತಾ ಕಿಟಕಿಯ ಬಳಿ ಬಂದ, ಕಿಟಕಿಯ ಬಳಿ ಸೀಮಾ ಕುಳಿತಿದ್ದಳು. ಆ ಕಿಟಕಿ ಪೂರ್ತಿ ಮುಚ್ಚಿತ್ತು, ಅಂದರೆ ಗ್ಲಾಸ್, ತೆಗಯಲು ಆಗದೆ ಇರುವಂತಹದು.....ನಾವು ದುಡ್ಡು ಕೈಲಿ ಹಿಡಿದುಕೊಂಡಿದ್ದೇವೆ, ಆದರೆ ಕೊಡಲು ಆಗುತ್ತಿಲ್ಲ......ಆ ಅಜ್ಜ ಮೊದ ಮೊದಲು ದೈನ್ಯತೆಯಿಂದ ಯಾಚಿಸುತ್ತಾ ಇದ್ದವನು ಇದಕ್ಕಿಂದ ಹಾಗೆ ರೋಚ್ಚಿಗೆದ್ದು ಪದೇ ಪದೇ ಆ ಗಾಜಿನ ಕಿಟಕಿಯ ಮೇಲೆ ಜೋರಾಗಿ ಬಾರಿಸುತ್ತಾ ಕಿರುಚಾಡಲು ಆರಂಭಿಸಿದ.....ನಾವಿಬ್ಬರು ಕಂಗಾಲಾಗಿ " ಆ ಕಡೆಯಿಂದ ಬನ್ನಿ" ಎಂದೆವು. ಆ ಅಜ್ಜನಿಗೆ ಏನು ಕೇಳಿಸಿತೋ ಬಿಟ್ಟಿತೋ ಅವನು ಕುಡಿದಿದ್ದ ಅಂತ ಕಾಣಿಸುತ್ತೆ, ಇನ್ನಷ್ಟು ಜೋರಾಗಿ ಕಿರುಚಾಡಿ ಆ ಗಾಜಿನ ಮೇಲೆ ಉಗಿದು....ಹೌದು ಚೆನ್ನಾಗಿ ಉಗಿದು ಅಲ್ಲಿಂದ ಹೋಗಿ ಬಿಟ್ಟ. ನಾನು ಆವಾಗಲೆ ಹೇಳಿದಂತೆ ಆ ಬಸ್ ಜನರಿಂದ ತುಂಬಿ ತುಳುಕುತಿತ್ತು. ಆ ಉಗುಳು ಗಾಜಿನ ಮೇಲೆ ಜಾರುತಿದ್ದಂತೆ ನಮ್ಮ ಇಬ್ಬರ ಕಣ್ಣುಗಳು ತುಂಬತೊಡಗಿದ್ದವು. ಆ ಕಡೆ ಈ ಕಡೆ ಇದ್ದ ಜನಗಳು ಪರಿಹಾಸ್ಯ ಮಾಡಿ ನಗುತ್ತಿದ್ದರು.... ಅವಮಾನ, ನೋವಿನಿಂದ ಇಬ್ಬರು ತಲೆ ತಗ್ಗಿಸಿ ಕೂತೆವು, ನನಗೆ ಅವಳ ಮುಖ ನೋಡುವ ಧೈರ್ಯ ಇರಲಿಲ್ಲ, ನಾನು ನೋಡಿದರೆ ಇಬ್ಬರು ಅಳುತ್ತೇವೆ ಎಂದು. ಅಷ್ಟರಲ್ಲಿ ಬಸ್ ಹೊರಟಿತು. ಬಸ್ ಸ್ಟ್ಯಾಂಡ್ ಇಂದ ಸಲ್ಪ ದೂರ ಹೋದಂತೆ ಅವಳು ಕೇಳಿದಳು " ನಾವು ಏನು ಹೇಳಿದೆವು ಅವನಿಗೆ, ಈ ಕಡೆ ಬಾ ಅಂತ ತಾನೇ ಅಷ್ಟಕ್ಕೇ ಅವನು ಈ ತರಹ ಮಾಡಿದ ನೋಡು " ಅಂತ. ಅವಳ ಮಾತಲ್ಲಿ ನೋವು ಹೆಪ್ಪುಗ ಟ್ಟಿತು. ನಾನೇನು ಮಾತಾನಡಲು ಸಾಧ್ಯವಾಗಲಿಲ್ಲ, ನನ್ನ ಗಂಟಲು ಕಟ್ಟಿತ್ತು, ನಾನೋ ಮಾತೆತ್ತಿದರೆ ಅಳುವ ಜಾತಿಯವಳು. ಆದರೆ ಈಗ ನಾನು ಅತ್ತರೆ ಕೆಲಸ ಕೆಡುತ್ತದೆ ಎಂದುಕೊಂಡು " ಇರಲಿ ಬಿಡು ಸೀಮಾ" ಎಂದೆ. ಅಷ್ಟರಲ್ಲಿ ಬಸ್ ೨ ನೇ ಸ್ಟಾಪ್‌ಗೆ ಬಂದು ನಿಂತಿತ್ತು. ನಮ್ಮ ಸ್ಟಾಪ್‌ಗೆ ಇನ್ನೂ ೧೦ ನಿಮಿಷವಿತ್ತು, ಆದರೆ ನಾನು ಏಳು ಸೀಮಾ ಎಂದವಳೇ ಆ ಸ್ಟಾಪ್ ನಲ್ಲಿ ಇಳಿದು ಬಿಟ್ಟೆ, ಅವಳು ನನ್ನ ಒಟ್ಟಿಗೆ ಇಳಿದು ಬಿಟ್ಟಳು. ಅಲ್ಲೇ ಇದ್ದ ರಿಕ್ಷ ಹತ್ತಿ ಕುಳಿತೆವು. ರಿಕ್ಷದಲ್ಲಿ ಕುಳಿತದ್ದೇ ತಡ ಅವಳು ಬಿಕ್ಕಿ ಅಳಲಾರಂಬಿಸಿಡಳು, ನಿಜವಾಗಲೂ ನೋಡಿದರೆ ತುಂಬಾ ಗಟ್ಟಿ ಹುಡುಗಿ ಅವಳು, ಅವಳ ಸ್ಥಿತಿ ಹಾಗಾದರೆ ನನ್ನ ಬಗ್ಗೆ ಯೋಚಿಸಿ..... ನಾನು ತುಟಿ ಕಚ್ಚಿ ಅಳು ನುಂಗಿ ಅವಳನ್ನು ಅಪ್ಪಿ ಹಿಡಿದೆ. ನಾವು ಅವಳ ಮನೆ ಹತ್ತಿರ ಇಳಿದೆವು. ನನ್ನ ಮನೆಗೆ ಅಲ್ಲಿಂದ ೫ ನಿಮಿಷ ದೂರವಿತ್ಟು ಹಾಗಾಗಿ ಅಲ್ಲಿಗೆ ನನ್ನ ತಂದೆಯವರು ನನ್ನನ್ನು ಯಾವಾಗಲು ಕರೆದುಕೊಂಡು ಹೋಗಲು ಬರುತ್ತಿದ್ದರು, ಆ ದಿನ ಕೂಡ ಬಂದಿದ್ದರು. ನಾನು ಅವಳಿಗೆ ಬೈ ಹೇಳಿ ತಂದೆ ಕಡೆ ಹೆಜ್ಜೆ ಹಾಕುತ್ತಿದಂತೆ ಅಳಲಾರಂಭಿಸಿದ್ದೆ. ನನಗೆ ಯಾವಾಗಲು, ಆಲ್‌ಮೋಸ್ಟ್ ೧೦ ವರ್ಷ ಆದರೂ ಕಾಡುವ ಪ್ರಶ್ನೆ ಇದು: - ಆ ಮನುಷ್ಯ ಹಾಗೇಕೆ ವರ್ತಿಸಿದ? ನಾವಿಬ್ಬರು ಇವಾಗಲೂ ತುಂಬಾ ಒಳ್ಳೇ ಸ್ನೇಹಿತೆಯರು... ಈವರೆಗೂ ಆ ನೋವು ನಮ್ಮಿಬ್ಬರನ್ನೂ ಕಾಡುತ್ತಿದೆ..ಮೊನ್ನೆ ಮೊನ್ನೆ ತಾನೇ ಮಾತಿನಲ್ಲಿ ಈ ವಿಷಯ ಬಂತು....ಆವಾಗ ಮತ್ತೆ ನಮ್ಮ ಮನಸ್ಸುಗಳು ಅದೇ ನೋವು ತಿಂದ ಅನುಭವ ಆಯಿತು... 

Tuesday, April 17, 2012

ಪುಷ್ಪ


ಒಂದೇ ದಿನ ಬದುಕುವೆಯಲ್ಲ
ಎಲ್ಲಿಂದ ಸಂತಸ ಕದ್ದು ತರುವೆ ?
ನಾಳೆಗಳ ಯೋಚನೆ ನಿನಗಿಲ್ಲ
ಅದಕೆ ಸದಾ ನಗುತ್ತಿರುವೆಯೇ?
ಚೆಂದದ ಮೃದು ಪರಿಮಳ ನಿನ್ನ ಮೈ
ನಿನ್ನಂದಕ್ಕೆ ತಲೆ ಬಾಗದಿರುವವರಾರು
ಗೆಳತಿ ನಿನ್ನ ಮೃದುತನಕ್ಕೆ ಸಾಟಿ ಇಲ್ಲ ಜಗದಲಿ
ದೇವನ, ಚೆಲುವೆಯ ಮುಡಿಗೇರಿದರೂ ಚೆಂದ
ಶವದ ಮೇಲಿದ್ದರೂ ಸಾರ್ಥಕ
ಒಣಗಿ ಹೋದರೂ ನಿನ್ನ ಹೆತ್ತ ತಾಯಿಗೆ ಗೊಬ್ಬರವಾಗುವೆ.
ನಿನ್ನ ಕಂಡಾಗೆಲ್ಲಾ ನೆನಪಾಗುವುದು ಮಗುವಿನ ನಗು
ನೋಡುಗರ ಕಣ್ಮನ ಸೆಳೆಯುವ ಪುಷ್ಪ ರಾಣಿ ನೀ

Thursday, April 12, 2012

ಬರ್ತ್ ಡೇ ಪಾರ್ಟಿ 

ಪುಟ್ಟ ಪುಟ್ಟಿ ಸೇರಿ ನಡೆಸಿದ್ದರು ಆನೆ ಬೊಂಬೆಯ ಬರ್ತ್ ಡೇ ಪಾರ್ಟಿ
ಆಟದ ಪ್ಲೇಟ್ ಗಳು ಬಂದವು , ಚಮಚ, ಫೋರ್ಕ್ ಗಳೂ ರೆಡಿ ಆದವು
ಅನೆ ಬೊಂಬೆಗೆ ಕ್ರೀಮ್, ಪೌಡರ್ ಹಚ್ಚಿ ಮುದ್ದು ಮಾಡಿದಳು ಪುಟ್ಟಮ್ಮ
ಕೇಕ್ ತಂದು ಎಲ್ಲಾ ಜೋಡಿಸಿದ್ದು ಮಾತ್ರ ಪುಟ್ಟಣ್ಣ
ಬೆಕ್ಕು, ನಾಯಿ, ದನ ಎಲ್ಲಾ ಹಾಜರಾದವು ಪಾರ್ಟಿಗೆ 
ಹ್ಯಾಪ್ಪಿ ಬರ್ತ್ ಡೇ ಹೇಳಿ ಕೇಕ್ ಕಟ್ ಮಾಡಿದ್ದೂ ಆಯ್ತು 
ಅಷ್ಟರಲ್ಲೇ ಶುರುವಾಯಿತು ನೋಡಿ ಪುಟ್ಟ-ಪುಟ್ಟಿಯ ಜಗಳ
ದೊಡ್ಡ ಪ್ಲೇಟ್ ಗಾಗಿ ಶುರುವಾಗಿದ್ದು ಫೈಟಿಂಗ್ 
ಕೈ ಕೈ ಮಿಲಾಯಿಸಿದ್ದೂ ಆಯ್ತು, ಒಬ್ಬರ ಮೇಲೆ ಒಬ್ಬರು ಬಿದ್ದು ಹೊರಳಾಡಿದ್ದೂ ಆಯ್ತು
ಸಮಸ್ಯೆ ಬಗೆ ಹರಿಯಲೇ ಇಲ್ಲ !
ದನ, ನಾಯಿ, ಬೆಕ್ಕುಗಳೆಲ್ಲಾ  ದಿಕ್ಕು ಪಾಲಾಗಿ ಓಡಿದವು
ಕೊನೆಗೆ ಆನೆ ಬೊಂಬೆಗೂ ಅದೇ ಗತಿ;ಮೂಲೆಗೆ ಬಿತ್ತು ಬರ್ತ್ ಡೇ ಬೇಬಿ
ಜಗಳ ಮುಗಿದದ್ದು ಇಬ್ಬರ ಅಮ್ಮಂದಿರೂ ಒಂದೊಂದು ಏಟು ಕೊಟ್ಟು ಮಲಗಿಸಿದಾಗ
ಅಂತೂ ಇಂತೂ ಬರ್ತ್ ಡೇ ಪಾರ್ಟಿ ಮುಗೀತು........




Wednesday, April 11, 2012

Save girl child

ಘಮ್ಮನೆ ಪಸರಿಸಿತು ಸುಗಂಧ ಧರೆಗೆ ಇಳಿದಳೋರ್ವ ಮಾಯಾ ಕಿನ್ನರಿ
ಚೆಲುವಿಗೆ ಮನಸೋತವರೆಷ್ಟೋ ಕಣ್ಣುಗಳ ಬೆಳಕಿಗೆ  ಮರುಳಾದವರೆಷ್ಟೋ
ನಗುವಂತೂ  ಹೂಗಳನೂ  ನಾಚಿಸಿತಲ್ಲ 

ನಾ ಅವಳ ಬೆನ್ನು ಹತ್ತಿ ಹೊರಟೆ ಕಿನ್ನರಿಯ ಮಾಯಾ ನಗುವಿನ ರಹಸ್ಯ ತಿಳಿಯಲು 

ಕಿನ್ನರಿ ಹೊಕ್ಕಿದ್ದು ಒಂದು ಮನೆಗೆ, ಅಲ್ಲಿ ಕೇಳಿದ್ದು ರೋಗಿಗಳ ನರಳಾಟ, ಒರಲಾಟ 
ರೋಗಿಗಳೆಂದರೆ ರೋಗಿಗಳಲ್ಲ,  ರೋಗಗ್ರಸ್ಥ ಮನಗಳ ಮನುಜರು 
ಸೇವೆ ಮಾಡಿದಳು ಕಿನ್ನರಿ ನಗು ಮೊಗದಲಿ, ಶಾಂತಿಯಲಿ, ತಾಳ್ಮೆಯಲಿ
ಕಿನ್ನರಿಯ ನಗುವಲಿ  ರೋಗಿಗಳ ನರಳಾಟ ಮುಚ್ಚಿಹೊಯಿತಲ್ಲ 
ಅವರ ಮನವೂ ತಂಪಾಯಿತು
ಹೂವಿನ ಸರದಂತೆ ಜವಾಬ್ದಾರಿಗಳ ಎತ್ತಿದಳು ಮಾಯದಲಿ
ಮತ್ತದೇ ಸುಂದರ ತಂಪಾದ ಬೆಳದಿಂಗಳ ನಗೆ ಚೆಲ್ಲಿದಳು

ಅರರೇ, ಕಿನ್ನರಿ ಹೊರಟದೆಲ್ಲಿಗೆ, ಬಾವಿಯ ಕಟ್ಟೆ ಮೇಲೆ ಕುಳಿತು ಮಾಡುತಿಹಳು ಏನು ?
ಸನಿಹಕೆ ಹೋದರೆ ಕಂಡದ್ದೇನು? ನೋವು ಯಾತನೆಗಳ ಕಣ್ಣೀರ ರೂಪದಲಿ ಬಿದ್ದಿಹುದು
ಅದೆಲ್ಲಾ ಮಾಯಕಿನ್ನರಿಯ ಮುಖವಾಡದಿಂದ ಹೊರಬಿದ್ದಿಹುದೇ, ಅಹುದಲ್ಲ ?
ಕಿನ್ನರಿ ನನ್ನ ನೋಡಿ ಮತ್ತೆ ಮುಖವಾಡ ಧರಿಸಿ ಮತ್ತದೇ ಚೆಂದದ ನಗೆ  ನಕ್ಕಳು

ಈಗ ಆ ನಗುವಲಿ ಹಿಂದೆ ಎಂದೂ  ಕಾಣದ ಸೊಗಸಿತ್ತು  ಮೊಗದಲಿ  ಮತ್ತದೇ ಶಾಂತಿ , ಮನ  ಕರಗಿಸುವ ಪ್ರೀತಿ
ಅವಳ ತಾಳ್ಮೆಗೆ  ಬೆರಗಾಗಿ ಹೊರಬಂದರೆ ಏನಾಶ್ಚರ್ಯ ಜಗದಲಿ ತುಂಬುತ್ತಿಹರು ಇಂತಹುದೇ ಕಿನ್ನರಿಯರು
ಮತ್ತವರ ಹೆಸರೂ ಒಂದೇ "ಸ್ತ್ರೀ " 
















Tuesday, April 10, 2012

ವಿಧಿಯಾಟದ ಮುಂದೆ ಸೋಲದವರಾರು
ನಾನೂ ಸೋತೆ...
ಆದರೆ ಮತ್ತೆ ಏಳುತ್ತೇನೆ
ಎಂದಾದರೂ ಗೆದ್ದೇ ಗೆಲ್ಲುತ್ತೇನೆ.





Saturday, April 7, 2012

ನೂರು ಕಾರಣಗಳು ಬೇರಾಗಲು
ನೂರು ನೆಪಗಳು ಸಿಡಿಯಲು
ಕಾರಣ-ನೆಪ ಬೇಡ ಪ್ರೀತಿಸಲು

Friday, April 6, 2012

ಕಹಿ

ಕಹಿಯಾದರೆ ಬಾಯಿ ತಿನ್ನಬಹುದು ಸಿಹಿ
ಕಹಿಯಾದರೆ ಮಾತು ಮಾಡುವುದು ಏನು 
ಕಹಿಯಾದರೆ ಮನ ಸರಿಯಾದಿತೇ ಸಂಬಂಧ
ಕಹಿಗಿಂತ ಬೇರೆ ವಿಷ ಯಾವುದು ಜಗದಲಿ ?

Wednesday, April 4, 2012

ಒಂದಾಗಲಾರೆವು ನಾವು ಎಂದೂ

ನಾವಿಬ್ಬರೂ ಜೊತೆಯಾಗೆ ಇರುತ್ತೇವೆ
ದಿನ-ರಾತ್ರಿ ಎಲ್ಲ ಒಟ್ಟಿಗೆ ಕಳೆಯುತ್ತೇವೆ
ಸೂರ್ಯನ ಎಳೆ ಬಿಸಿಲು, ಬೆಳದಿಂಗಳ ರಾತ್ರಿ ಎಲ್ಲವನ್ನೂ ಜೊತೆಯಾಗೆ ಅನುಭವಿಸುತ್ತೇವೆ.
ಬಗೆ ಬಗೆ ಜನರು ಹಾದು ಹೋಗುತ್ತಾರೆ ನಮ್ಮನ್ನು
ಮಳೆ ಬರುವಾಗ, ಗುಡುಗ ಸದ್ದು ಕೇಳಿ ಬೆದರುವುದಿಲ್ಲ
ಏಕೆಂದರೆ ದಿನ ದಿನ  ಗಡ-ಗಡ ಸದ್ದು ಕೇಳಿ ಆನಂದಿಸೋ ಅಭ್ಯಾಸ ನಮ್ಮದು
ಜೊತೆಯಾಗೆ ಬದುಕುತ್ತಲೇ ಇರುತ್ತೇವೆ ಸಾವಿನವರೆಗೂ 
ಕಲ್ಲುಗಳ ಸಹವಾಸ, ಕೆಲವೊಮ್ಮೆ ಕುರುಚಲು ಗಿಡಗಳ ಸಾಮೀಪ್ಯ
ಮನುಜರಂತೆ ನಾವೂ, ಬದುಕಿನುದ್ದಕ್ಕೂ 
ಎಂದೂ ಒಬ್ಬರ ಮನಸ್ಸ ಮತ್ತೊಬ್ಬರು ಅರಿಯಲಾರೆವು
ಎಂದೂ ನಮ್ಮತನವ  ಬಿಟ್ಟು ಒಂದಾಗಲಾರೆವು....      






Tuesday, April 3, 2012

ಪ್ರೀತಿ, ಖುಷಿ, ನಗು ಇದ್ದರೆ ಬದುಕಿಬಿಡಬಹುದು...ಎಲ್ಲವೂ ನಮ್ಮಲ್ಲೇ ಇದೆ, ಆದರೆ ನಾವು ಅದನ್ನ ಬೇರೆಲ್ಲೋ ಹುಡುಕ್ತಾ ಇರ್ತೀವಿ. 

Monday, April 2, 2012

ಅಹಲ್ಯೆಗೆ ಕಾದೂ ಕಾದೂ ಸಾಕಾಯ್ತು...ಕೊನೆಗೂ ರಾಮ ಬರಲೇ ಇಲ್ಲ .


Sunday, April 1, 2012

ಒಂದು ದಿನ ನನ್ನ ಬದುಕ ಬದುಕಿ ನೋಡಿ
ಉಸಿರುಗಟ್ಟುವ ಯಾತನೆಗಳ ಇಣುಕು ನೋಟ ನೋಡಿ
ಮನಸ್ಸಿನ ಗಾಯಗಳ ಬರೆಗಳ ಮೇಲೊಂದು ದೃಷ್ಟಿ ಹಾಯಿಸಿ
ಎದುರಾಗುತ್ತಿರುವ ಸಮಸ್ಯೆಗಳ ತುಣುಕೊಂದ ತಿಂದು ನೋಡಿ
ಅನುಭವಿಸುತ್ತಿರುವ ನೋವಿನ ಪರಿಯ ಅನುಭವಿಸಿ ನೋಡಿ
ಹೊತ್ತಿರುವ ಜವಾಬ್ದಾರಿಗಳ ಭಾರವ ನೀವೆತ್ತಿ ನೋಡಿ
ಪರಿಹಾಸಗಳ ವಿಧಿಯ ಅಟ್ಟಹಾಸಗಳ ಕಡೆ ನನ್ನ ಹತಾಶೆಯ ನಿಟ್ಟುಸಿರು ಕೇಳಿ
ನನ್ನ ದೇಹದ ಮೇಲಾದ ವೈಪರೀತ್ಯಗಳ ಪರಿ ನೋಡಿದಿರೋ 
ದೇಹ ಮನಸ್ಸು ಎರಡೂ ಕೆಟ್ಟಾಗ ಮನುಜನೇಕೆ ಹುಚ್ಚಾಗುತ್ತಾನೆ ತಿಳಿಯಿರಿ
ಇದೆಲ್ಲದರ ನಡುವೆಯೂ ನನ್ನ ನಗುವ ಕಂಡು ಮರುಳಾಗುತ್ತೀರಿ ನೀವು !

ಇಣುಕು ನೋಟ , ಏತಕ್ಕೆ ಚಿನ್ನಿ
ಮುದ್ದು ಕಂದಮ್ಮ, ನನ್ನ ಗುಬ್ಬಚ್ಚಿ 

Saturday, March 31, 2012

ಇವತ್ತು ಅಜ್ಜನ ಮನೆಯಲ್ಲಿ ತುಂಬಾ ಶಾಂತಿ. ನಂಬಿಕೆ ಇಲ್ಲದಿದ್ದರೆ ಈ ಫೋಟೋ ನೋಡಿ...


ಮನವೇಕೋ ಭಾರ, ಕಣ್ಣಂಚೂ ಒದ್ದೆ
ಹೊಟ್ಟೆಯಲೂ ಸಂಕಟ, ತಲೆಯಲಿ ತಾಕಲಾಟ
ಬಯಸಿ ಬಯಸಿ ಪಡೆದುದು ಮತ್ತೋರ್ವರ ಸೊತ್ತು
ಅದ ಪಡೆಯಲು ಇಷ್ಟೆಲ್ಲಾ ಕಸರತ್ತು
ಆರಾರ ಶಾಪ-ನಿಟ್ಟುಸಿರು ತಗಲುತ್ತದೆಯೋ
ಬದುಕಿನ ಬಂಡಿ ಹೇಗೆ ಗುರಿ ಮುಟ್ಟುತ್ತದೆಯೋ

Thursday, March 29, 2012

ಚಿತ್ತ ವಿಭ್ರಮೆ

ಶೂನ್ಯದಲ್ಲೆಲ್ಲೋ ನೆಟ್ಟ ದೃಷ್ಟಿ, ಅಸ್ಪಷ್ಟ ಗೊಣಗಾಟ
ಬಳಲಿ ಬೆಂಡಾಗಿ ಹತ್ತಿಯಂತಾಗಿರುವ ದೇಹ
ಕಣ್ಣು ಮಿಲಾಯಿಸಿದೊಡನೆ ವಿಚಿತ್ರ ನಗು
ಅಸ್ತವ್ಯಸ್ತಗೊಂಡ ಮೈ ಮೇಲಣ ಅರಿವೆ
ವಿಕಾರಗೊಂಡ ಕಳಾಹೀನ ಮುಖ
ಕೈಕಾಲುಗಳ ವಿಚಿತ್ರ ಚಲನೆ
ದೇವಾ, ಯಾವ ಪಾಪಕ್ಕೆ ಈ ಶಿಕ್ಷೆ
ಜೀರ್ಣಗೊಂಡ ಮನಸು-ದೇಹಕ್ಕೆ ಯಾಕೀ ಯಾತನೆ ?

Wednesday, March 28, 2012


ನನ್ನ ಜೀವದ ಜೀವ ನೀನು
ನಿನ್ನ ಬಿಟ್ಟು ಇರುವೆನೇ ನಾನು?
ನನ್ನ ಕಣ್ಣಲಿ ನಿನ್ನ ಬಿಂಬ
ನಿನ್ನ ನಗುವಲಿ ನನ್ನ ಉಸಿರು
ನನ್ನ ಉಸಿರ ನಿಲ್ಲಿಸಬೇಡ ಗೆಳೆಯಾ
ನಗುತಿರಲು ನೀನು ಬದುಕುವೆ ನಾನು

Tuesday, March 20, 2012

ನಗು





ನಗುವಿನ ಒಡತಿ ನಾನೇ
ನಗು, ನನ್ನ ನೋಡಿ ನಗು ಕಲಿಯಿತು
ಅಳು, ನನ್ನ ನೋಡಿ ದುಃಖ ಮರೆಯಿತು
ಜನ ನನ್ನ ನೋಡಿ ನಕ್ಕರು
ಮನ, ಎಲ್ಲಾ ನೋಡಿ ಅತ್ತಿತು!

Monday, March 19, 2012

ದೇಶ ಪ್ರೇಮಿ


ಈಚೆಗೆ ಓದಿ ಮುಗಿಸಿದ್ದು.

ಕಂಬಾರರ ’ಶಿಖರಸೂರ್ಯ’, ಸೂರ್ಯನಾರಾಯಣ ಚಡಗರ ’ ಮನೆತನ ’, ಜಯಂತರ ’ಚಾರ್ ಮಿನಾರ್ ’, ಬೆಳೆಗೆರೆಯವರ ’ ರೇಷ್ಮೆ ರುಮಾಲು ’ , ಮಿತ್ರಾ ಅವರ ’ಮಾಯಕದ ಸತ್ಯ’ ಮತ್ತೆ ಗೋಪಾಲಕೃಷ್ಣ ಪೈ ಅವರ’ ಮೂರು ಮತ್ತಿಷ್ಟು’ ಈಚೆಗೆ ಓದಿ ಮುಗಿಸಿದ್ದು...ಮತ್ತಷ್ಟು ಬಾಕಿ ಇವೆ ಸಂಗ್ರಹದಲ್ಲಿ ಮುಗಿಸಲು! :) ಪುಸ್ತಕಕಿಂತ ಒಳ್ಳೆ ಗೆಳೆಯರಾರು ? ಪ್ರಪಂಚ ಮರೆಸಿಬಿಡುತ್ತವೆ.