Thursday, June 26, 2014

ವಸಂತ

ಮರಕ್ಕೆ ಅಂಟಿ ಹುಟ್ಟಿ 
 ಅದರದೇ ಭಾಗವಾಗಿರುವ 
ಎಲೆಗಳು ಉದುರಿ ಬೀಳುವಾಗ ಅತ್ತವೇನು? 
 ಕಾಲ್ತುಳಿತಕ್ಕೋ, ಕಸಬರಿಕೆ ಕಡ್ಡಿಗಳಿಗೊ 
ಸಿಲುಕಿ ಪುಡಿ ಪುಡಿಯಾದಾಗ ?
ಇಲ್ಲ, ಉರಿದು ಬೂದಿಯಾಗುವಾಗ 
ಯಾತನೆ ಪಟ್ಟವೇನು? 
 ಮತ್ತೊಮ್ಮೆ ವಸಂತ ಬಂದು 
ಮರದಲ್ಲಿ ಚಿಗುರೊಡೆಯುವ 
ಕಾಲಕ್ಕಾಗೆ ಪತನ ಹೊಂದಿವಲ್ಲವೇ? 
ತಿಳಿ ಇದರ ಮರ್ಮ 
 ಇಂದು ಉದುರಿದೆನಾಯ್ತು? 
 ಎಂದೋ ಬರಬಹುದು ಮತ್ತೆ ವಸಂತ ಬಾಳಿನಲಿ 
 ಚಿಗುರಬಹುದು ಹೊಸ ಕುಡಿಯೊಂದು... 

ಪ್ರೀತಿ

ಅದು ಹಾಗೇನೆ
ಎಂದಿಗೂ ಅಲ್ಪ ತೃಪ್ತವಲ್ಲ
ಬೇರೇನೆನ್ನೂ ಬೇಡುವುದಿಲ್ಲ!
ಮನಸ್ಸಿನ ಬ್ಯಾಂಕಿನಲ್ಲಿ 
ಗಾಯಗಳ ಠೇವಣಿ
ಇಡಬಾರದು ಸ್ವಾಮಿ!

ನಿಮಗೋಸ್ಕರ ಅದು 
ದುಡಿದು ಕೊಟ್ಟೀತು
ನೋವೆಂಬ ಬಡ್ಡಿಯ! 

ಬಡ್ಡಿ, ಚಕ್ರಬಡ್ಡಿಗಳು
ಸೇರಿ ಹುಟ್ಟಿಸಿಯಾವು
ರೋಗವೆಂಬ ಮಾರಿಯ!

Tuesday, June 3, 2014