ಪುಟ್ಟನ ಡ್ರಾಮಾ !
ಇವತ್ತು ’ಅಂಜದ ಗಂಡು ’ ಸಿನಿಮಾ ನೋಡುತ್ತಾ ಇದ್ವಿ, ಅದೇರಿ ಪೀಸ್ ಪೀಸ್!!! ನನ್ನ ಮಗರಾಯ ಕೂಡಾ ಕೂತು ನೋಡಿದ್ದೇ ನೋಡಿದ್ದು. ಅದ್ರಲ್ಲಿ ರವಿಚಂದ್ರನ್ ಹಳ್ಳಿಗೆ ಹೋಗಿ ರಾಗಿಮುದ್ದೆ ತಿನ್ನುವ ಸೀನ್ ಬರುತ್ತೆ. ಅವನು ಅದನ್ನು ಹಣ್ಣಿನ ಥರಾ ತಿಂದು ಏನು ಉಪ್ಪು ಕಾರ ಇಲ್ಲವಲ್ಲ ಅಂತ ಕೇಳ್ತಾನೆ. ಅದಿಕ್ಕೆ ತೂಗುದೀಪ ಶ್ರೀನಿವಾಸ್ ಖಾರ ಬೇಕಾ ? ಅಂತ ಕೇಳಿ ಹಸಿ ಮೆಣಸಿನಕಾಯಿ ತಿನ್ನಲು ಕೊಡುತ್ತಾನೆ. ಅದನ್ನು ತಿಂದ ರವಿ ಮುಖ ಹೆಂಗಾಗುತ್ತೆ ಗೊತ್ತಲ್ಲ. ನನ್ನ ಪುಟ್ಟನಿಗೆ ತುಂಬಾ ಖುಶಿಯಾಯ್ತು ಆ ಸೀನ್. ತನ್ನ ಪಪ್ಪನ ಹತ್ತಿರ ಹೇಳಿ ಎರೆಡೆರೆಡು ಸಲ ನೋಡಿದ. ಸಂಜೆ ನಮ್ಮ ಮನೆಗೆ ಬಂದ ಅವನ ರಘು ಮಾಮನಿಗೆ ಅದನ್ನು ಹೇಳಿದ್ದು ಹೀಗೆ:" ರಘು ಮಾಮ, ನಾವು ಫಿಮ್ ನೋಡಿದ್ವಿ, ಅದ್ರಲ್ಲಿ ಅವನು ಚಿಕ್ಕು ತಿಂತಾ ಇರ್ತಾನೆ. ಉಪ್ಪು ಇಲ್ಲ, ಖಾರ ಇಲ್ಲ ಅಂತಾನೆ, ಖಾರ ಬೇಕಾ? ತಿನ್ನು ಅಂತ ಕರಿಬೇಸೊಪ್ಪು ಕೊಡ್ತ್ತಾನೆ. ಅದು ತಿಂದು ಅವನು ಊಹೂಂ.....ಅಂತಾ ಅಳ್ತಾನೆ" ಅಂತ. ರಘುಗೆ ಅರ್ಥಾನೇ ಆಗಿಲ್ಲ ಪಾಪ!
ರವಿಚಂದ್ರನ್ ಅಳೋದು ನನ್ನ ಮಗ ತೋರಿಸಿದ್ದು ಹೀಗೆ! :)b
No comments:
Post a Comment