Wednesday, February 29, 2012

ಶತಮಾನಗಳಿಂದ ನೀವು ನೀವೇ ಜೊತೆಯಾಗಿ ನಿಂತೀದ್ದಿರಲ್ಲಾ ? ಎಂದಾದರೂ ಒಬ್ಬರೊಡನೆ ಒಬ್ಬರು ಮಾತನಾಡಿದ್ದೀರಾ ?

ಹೇಳಿ ಕಲ್ಲ ಪ್ರತಿಮೆಗಳೇ, ಏನೇನ ನೋಡಿದಿರಿ ನೀವು
ಇಲ್ಲಿ ರಾಜರ ದರ್ಪ ಕಂಡಿರಾ ? ಇಲ್ಲಾ....ರಾಜ ನರ್ತಕಿಯರ ಗೆಜ್ಜೆಗಳ ಝಣತ್ಕಾರ ಕೇಳಿದಿರಾ ?
ವಿಗ್ರಹ ಛೇಧಕರ ವಿಕಾರ-ಭೀಭತ್ಸ ಮುಖಗಳ ಕಂಡು ಬೆದರಿದಿರಾ ?
ಶತಮಾನಗಳಿಂದ ನೀವು ನೀವೇ ಜೊತೆಯಾಗಿ ನಿಂತೀದ್ದಿರಲ್ಲಾ ?
ಎಂದಾದರೂ ಒಬ್ಬರೊಡನೆ ಒಬ್ಬರು ಮಾತನಾಡಿದ್ದೀರಾ ?
ಅದೋ ಆ ಅಜ್ಜಿ ಬಂದು ನಿಮ್ಮ ಬಳಿ ಗೋಳುಗರೆಯುತ್ತಿಹಳಲ್ಲಾ, ಕೇಳುತ್ತಿದೆಯೇ ನಿಮಗೆ?
ಆ ಕಂದಮ್ಮ ಬಂದು ನಿಮ್ಮ ಮೇಲೆ ಹತ್ತಿ ಆಡುತ್ತಿಹನಲ್ಲಾ, ಕಚುಗುಳಿಯಾಗುತ್ತಿಲ್ಲವೇ ನಿಮಗೆ ?
ದೂರದ ತೋಟದ ಗುಲಾಬಿಯೊಂದು ನಿಮ್ಮ ನೋಡಿ ನಗುತಿಹುದಲ್ಲಾ, ಒಂದಿನಿತೂ ಮುಗುಳುನಗೆಯಿಲ್ಲವೇನು ?
ಯಾತ್ರಿಕರ ಕುತೂಹಲಭರಿತ ನೋಟ ಇಷ್ಟವಾಗುತ್ತಿಲ್ಲವೇನು ?
ಮಾತನಾಡಿ ಓ ಕಲ್ಲ ಪುತ್ಥಳಿಗಳೇ .....
ಯಾವ ಶಿಲ್ಪಿ ಕೆತ್ತಿದ ನಿಮ್ಮನ್ನು, ಯಾವ ರಾಜನ ದರ್ಬಾರಿನ ಕಥೆಗಳು ನೀವು ?
ಕೈ-ಕಾಲು, ಉಗುರು, ಬೆರಳು, ಹಣೆ, ಮುಖ,ಮೂಗು ಎಲ್ಲವೂ ಇದ್ದು
ಓಡಾಡದೇ, ಮಾತಾಡದೇ ಉಳಿದಿಹರಲ್ಲ ?
ಒಂದರೆಗಳಿಗೆ ಜೀವ ಬಂದಿದ್ದರೆ ನಿಮ್ಮನುಭವವನ್ನು ಹಂಚಿಕೊಳ್ಳುತ್ತಿದ್ದೀರೆ ? 




ನೆನಹು


ಜೀವನದ ತಿರುವಿನಲ್ಲೆಲ್ಲೋ ನಿಂತು ನೋಡಿದಾಗ
ನಿನ್ನ ನಗು ಮುಖ ಮಿಂಚಿ ಮರೆಯಾಯ್ತು
ನಿನ್ನ ಸಿಹಿ ನೆನಹು ನನ್ನ ಮುಖದಲ್ಲೊಂದು ನಗುವಿನೆಳೆಯ ತೀಡಿ ಹೋಯ್ತು

Friday, February 24, 2012

Hero!





With a wide smile!


ಜಾರಿ ಬಿದ್ದಾಗ ನಕ್ಕವರೇ, ಅವಮಾನಗಳ ನುಂಗುವದ ಕಲಿಸಿದಿರಿ
ತೊದಲಿದಾಗ ಅಣಕಿಸಿದವರೇ, ಧೈರ್ಯ ಎನೆಂದು ತಿಳಿಸಿಕೊಟ್ಟಿರಿ
ಸೋತಾಗ ಕೈ ತೋರಿಸಿದವರೇ, ಗೆಲುವಿನ ರುಚಿ ಹತ್ತಿಸಿದಿರಿ
ಕಣ್ಣೀರಿಟ್ಟಾಗ ಕೇಕೆ ಹಾಕಿದವರೇ, ನಗುವ ಚಟ ಹತ್ತಿಸಿದಿರಿ
ಕನಸ ಕೊಂದವರಿಗೆ ಶರಣು; ಬದುಕ ಕಲಿಸಿದವರು ನೀವಲ್ಲವೇ?

Tuesday, February 21, 2012


ಒಮ್ಮೆ ಬರೆದು ಅಳಿಸಿದ ಕಾಗದದಲ್ಲಿ ಹೊಸ ಅಕ್ಷರ ಬರೆದಾಗ ಹಳೆ ಅಕ್ಷರದ ಛಾಯೆ ಕಂಡತಾಯ್ತು...
ನಿನ್ನ ಹೆಸರ ನನ್ನ ಮನದಲ್ಲಿ ಕೊರೆದಾಗ ಹಳೆ ನೆನಪೊಂದು ಇಣುಕಿ ಮರೆಯಾಯ್ತು!

Sunday, February 5, 2012

Arama!

Add caption

ಅಮ್ಮ

ನನ್ನ ಕಂದ ಹೊಟ್ಟೆಯಲ್ಲಿ ಮಿಸುಗುವಾಗ ನಿನ್ನ ನೆನಪು
ನಾ ಹೀಗೆ ಒದೆಯುವಾಗ ನೀ ಇದೇ ಸುಖ ಪಟ್ಟೆಯೇನು ?
ನನ್ನ ಕಂದನಿಗೆ ಹಾಲೂಡಿಸುವಾಗ ನಿನ್ನ ನೆನಪು
ನಾ ನಿನಗೆ ಕಚ್ಚಿದಾಗ ನೀ ಇದೇ ನೋವು ತಿಂದೆಯೇನು?
ನನ್ನ ಕಂದನಿಗೆ ನೀರೆರೆಯುವಾಗ ನಿನ್ನ ನೆನಪು
ನಾ ಅಳುವಾಗ ನೀ ಅತ್ತೆಯೇನು ?
ನನ್ನ ಕಂದ ನಿದ್ದೆಗೆ ಸತಾಯಿಸುವಾಗ ನಿನ್ನ ನೆನಪು
ನನ್ನ ಹೊತ್ತು ನೀನೂ ರಾತ್ರಿಯೀಡಿ ತಿರುಗಿದೆಯೇನು ?
ನನ್ನ ಕಂದ ನೋವಿಂದ ಅಳುವಾಗ ನಿನ್ನ ನೆನಪು
ನಾ ನೋವು ತಿನ್ನುವಾಗ ನೀನೂ ಇದೇ ಯಾತನೆ ಪಟ್ಟೆಯೇನು ?
ನನ್ನ ಕಂದ ಊಟ ತಿನ್ನದಾಗ ನಿನ್ನ ನೆನಪು
ನಾ ಊಟ ಬಿಟ್ಟಾಗ ನೀನೂ ಅತಂಕ ಪಟ್ಟೆಯೇನು?
ನನ್ನ ಕಂದ ಬೆಳೆದು ನನ್ನಿಂದ ದೂರವಾಗುವ ಹೆದರಿಕೆ ನನಗೆ
ನಾ ನಿನ್ನಿಂದ ದೂರವಾದಾಗ ಮೌನವಾಗಿ ನಿಂತೆಯಲ್ಲ ?
ಇದೇ ಹೆದರಿಕೆ ನಿನಗೂ ಆಗಿತ್ತೇ?
ಅಮ್ಮ ಕ್ಷಮಿಸು ತಿಳಿದೋ-ತಿಳಿಯದೆಯೋ ನಾ ಮಾಡಿದ ತಪ್ಪುಗಳಿಗೆ....