ನಾವಿಬ್ಬರೂ ಜೊತೆಯಾಗೆ ಇರುತ್ತೇವೆ
ದಿನ-ರಾತ್ರಿ ಎಲ್ಲ ಒಟ್ಟಿಗೆ ಕಳೆಯುತ್ತೇವೆ
ಸೂರ್ಯನ ಎಳೆ ಬಿಸಿಲು, ಬೆಳದಿಂಗಳ ರಾತ್ರಿ ಎಲ್ಲವನ್ನೂ ಜೊತೆಯಾಗೆ ಅನುಭವಿಸುತ್ತೇವೆ.
ಬಗೆ ಬಗೆ ಜನರು ಹಾದು ಹೋಗುತ್ತಾರೆ ನಮ್ಮನ್ನು
ಮಳೆ ಬರುವಾಗ, ಗುಡುಗ ಸದ್ದು ಕೇಳಿ ಬೆದರುವುದಿಲ್ಲ
ಏಕೆಂದರೆ ದಿನ ದಿನ ಗಡ-ಗಡ ಸದ್ದು ಕೇಳಿ ಆನಂದಿಸೋ ಅಭ್ಯಾಸ ನಮ್ಮದು
ಜೊತೆಯಾಗೆ ಬದುಕುತ್ತಲೇ ಇರುತ್ತೇವೆ ಸಾವಿನವರೆಗೂ
ಕಲ್ಲುಗಳ ಸಹವಾಸ, ಕೆಲವೊಮ್ಮೆ ಕುರುಚಲು ಗಿಡಗಳ ಸಾಮೀಪ್ಯ
ಮನುಜರಂತೆ ನಾವೂ, ಬದುಕಿನುದ್ದಕ್ಕೂ
ಎಂದೂ ಒಬ್ಬರ ಮನಸ್ಸ ಮತ್ತೊಬ್ಬರು ಅರಿಯಲಾರೆವು
ಎಂದೂ ನಮ್ಮತನವ ಬಿಟ್ಟು ಒಂದಾಗಲಾರೆವು....

ಇತ್ತೀಚಿಗೆ ಓದಿದ ಸಾಲುಗಳಲ್ಲಿ ತುಂಬಾ ಇಷ್ಟವಾದ ಸಾಲುಗಳು
ReplyDeleteಚೆನ್ನಾಗಿ ಬರೆದಿದ್ದೀರಿ.
ಸ್ವರ್ಣಾ
Oh! really nice of u :)
ReplyDelete