Friday, April 26, 2013

ಪರಿಧಿ

ನಿನ್ನ ಪರಿಧಿಯಲ್ಲಿ
ನಿನ್ನ ಸುತ್ತ ಸುತ್ತುತ್ತಾ
ನನ್ನ ನಾ ಕಳೆದುಕೊಂಡೆ.
ನೀನೋ ನಿನ್ನ ಪರಿಧಿಯಲ್ಲೇ ಉಳಿದೆ
ನಾ ಅಳಿದರೂ ನೀನುಳಿದೆ.
ಚಾಕು, ಕತ್ತಿ, ಚೂರಿ ಯಾವುದೂ ಹರಿತವಲ್ಲ, ಮನುಷ್ಯನ ಕಣ್ಣ ನೋಟದ ಮುಂದೆ, ಅವನ ಮಾತಿನ ಮುಂದೆ....
ಇವತ್ತು ನನ್ನ ಪುಟ್ಟಣ್ಣ ಬರೆದ ಚಿತ್ರ, ಮತ್ತೆ ಇವತ್ತೇ ಅದನ್ನು ಹಾಕಬೇಕಂತೆ. ಸೋ, ರಾತ್ರಿ ರಾತ್ರಿ ಈ ಪೋಸ್ಟ್. ಅವನ ವಿವರಣೆ ಕೇಳಿ. ಮೊದಲನೇ ಚಿತ್ರದಲ್ಲಿರುವುದು ಟ್ಯಾಪ್. ಅದರಿಂದ ನೀರಿನ ಹನಿ ಬೀಳ್ತಾ ಇದೆ. ಎರಡನೇ ಚಿತ್ರದಲ್ಲಿರುವುದು ಆ ನೀರಿನ ಹನಿ. ಕ್ಯಾಮೆರಾದಲ್ಲಿ ಜೂಮ್ ಆಗುತ್ತಲ್ಲ, ಅದು ಅಂತೆ. :-)







Monday, April 22, 2013

ಬಳ್ಳಿ

ತಿರುಗಿದಲ್ಲೇ ಮತ್ತೆ ಮತ್ತೆ ತಿರುಗಿ
ರಾತ್ರಿಯಿಡಿ ಮತ್ತಲ್ಲೇ ಅಲೆದು
ಅರೆ!,ತುಳಿದಿದ್ದೇನೆ ನಾ ಮಾಯಾವಿ ಬಳ್ಳಿ?


ಗಂಟಲು ಪುರಾಣ


ಒಂದು ವಾರದಿಂದ ಗಂಟಲು ಮುಷ್ಕರ ಹೂಡಿದೆ. ನಾನು ಕಾಲ್ ಮಾಡಿದ್ರೆ ನಾನೇ ಅದು ಅಂತ ಯಾರೂ ನಂಬುತ್ತಿಲ್ಲ. ನನ್ನ ಫ಼್ರೆಂಡ್ಸ್ ಎಲ್ಲರೂ ತಮಾಷೆ ಮಾಡಿ ಮಾಡಿ, ನಾನದಕ್ಕೆ ಮತ್ತೆ ಮತ್ತೆ ನಕ್ಕು ಇದ್ದ ಸ್ವರವೂ ಬಿದ್ದು ಹೋಗಿದೆ. ನನ್ನ ಮಿತ್ರರೊಬ್ಬರು ಇದೇ ವಾಯ್ಸ್ ಚೆನ್ನಾಗಿದೆ, ಇರಲಿ ಬಿಡು ಅಂತ ಹರಸಿದ್ದೂ ಅಯ್ತು. ವಿದೇಶದಿಂದ ಬಂದ ಗೆಳತಿ ಫೋನ್ ಮಾಡಿದವರು ನನ್ನ ಮಧುರ ? ಕಂಠ ಕೇಳಿ ಗಾಬರಿಯಾಗಿ ಫೋನ್ ಇಟ್ಟೇಬಿಟ್ಟರು. ;) ಹೊಸ ಸ್ನೇಹಿತರೊಬ್ಬರಿಗೆ ಬೇಜಾರು, ನಾನು ಮಾತನಾಡುತ್ತಿಲ್ಲ ಅಂತ. ಮನೆಯಲ್ಲಿರುವ ಮಕ್ಕಳಿಗೆ ( ನನ್ನ ಮಗ ಮತ್ತು ಅಕ್ಕನ ಇಬ್ಬರು ಮಕ್ಕಳು) ಖುಷಿಯೋ ಖುಷಿ. ಬೇಕಾದೆದ್ದೆಲ್ಲಾ ಮಾಡುತ್ತಿದ್ದಾರೆ, ನಾನು ಬೈಯುವುದಿಲ್ಲ ಅಂತ. ಇನ್ನು ನನ್ನ ಗಂಡನಿಗೋ ಸದಾ ಚಿಂತೆ, ಇದ್ದ ಬಿದ್ದ ಮನೆ ಮದ್ದುಗಳನ್ನೆಲ್ಲಾ ಹೇಳಿದ್ರೂ ನಾನು ಯಾವುದನ್ನೂ ಮಾಡುತ್ತಿಲ್ಲ ಅಂತ. ಅಕ್ಕನಿಂದ ಬೈಸಿಕೊಂಡಿದ್ದೂ ಅಯ್ತು. ಊರಿನಿಂದ ಅಣ್ಣ (ನನ್ನ ತಂದೆಯವರು) ದಿನಕ್ಕೆರಡು ಸಲ ಫೋನ್ ಮಾಡಿ ತಲೆಬಿಸಿ ಮಾಡಿಕೊಂಡಿದ್ದೂ ಆಯ್ತು!. ನಂಗೋ ಎಲ್ಲದ್ದಕ್ಕೂ ಉದಾಸೀನ! :) ಸುಮ್ಮನೆ ಶೇರ್ ಮಾಡೋಣ ಅನಿಸಿತು!

Saturday, April 20, 2013

Tuesday, April 16, 2013

ಇದೂ ಒಂದು ಕಥೆ ?

ನೀನಿಲ್ಲದೇ ಬದುಕಿಲ್ಲ ಎಂದಳು ಹುಡುಗಿ
ನಿನ್ನಂಥವರಾರು ಇದ್ದರೂ ಬದುಕುತ್ತಿದ್ದೆ ಎಂದ ಹುಡುಗ
ಬದುಕುವುದನ್ನು ಬಿಟ್ಟೇ ಬಿಟ್ಟಳು ಹುಡುಗಿ

ಸಾವು

ಆತ್ಮಕ್ಕೆ ಸಾವಿಲ್ಲ ಅನ್ನುತ್ತಾರೆ ದೊಡ್ಡವರು, ತಿಳಿದವರು
ಆತ್ಮ ಬಂಧು ಹೋದ ಮೇಲೆ ಅತ್ಮವಿದ್ದೂ ಬದುಕಿದೆಯೇ?

Wednesday, April 10, 2013

Yugadi

ಅಂದೆಂದೋ ತಿಂದ ಬೇವು, ಸಿಹಿಯಾಗಲೇ ಇಲ್ಲ
ಆಮೇಲೆ ತಿಂದ ಬೆಲ್ಲವೋ ಕಹಿಯನ್ನೇ ತಂದಿತಲ್ಲ
ಇಂದೂ ಮರಳಿ ಬಂದಿದೆ ಯುಗಾದಿ, ಮತ್ತೆ ಬೇವು ಬೆಲ್ಲ
ಹೊಸ ಕನಸುಗಳೂ, ಆಸೆಗಳನ್ನು ಹೊತ್ತು ತಂದೀತಲ್ಲ
ಸಿಗಬಹುದೇ ಈ ವರುಷ ಬಾಳಿನಲ್ಲಿ ಬರೀ ಬೆಲ್ಲ?

Wednesday, April 3, 2013

Complexities

Human mind. Thats what was there in my mind :-)