Thursday, June 26, 2014

ವಸಂತ

ಮರಕ್ಕೆ ಅಂಟಿ ಹುಟ್ಟಿ 
 ಅದರದೇ ಭಾಗವಾಗಿರುವ 
ಎಲೆಗಳು ಉದುರಿ ಬೀಳುವಾಗ ಅತ್ತವೇನು? 
 ಕಾಲ್ತುಳಿತಕ್ಕೋ, ಕಸಬರಿಕೆ ಕಡ್ಡಿಗಳಿಗೊ 
ಸಿಲುಕಿ ಪುಡಿ ಪುಡಿಯಾದಾಗ ?
ಇಲ್ಲ, ಉರಿದು ಬೂದಿಯಾಗುವಾಗ 
ಯಾತನೆ ಪಟ್ಟವೇನು? 
 ಮತ್ತೊಮ್ಮೆ ವಸಂತ ಬಂದು 
ಮರದಲ್ಲಿ ಚಿಗುರೊಡೆಯುವ 
ಕಾಲಕ್ಕಾಗೆ ಪತನ ಹೊಂದಿವಲ್ಲವೇ? 
ತಿಳಿ ಇದರ ಮರ್ಮ 
 ಇಂದು ಉದುರಿದೆನಾಯ್ತು? 
 ಎಂದೋ ಬರಬಹುದು ಮತ್ತೆ ವಸಂತ ಬಾಳಿನಲಿ 
 ಚಿಗುರಬಹುದು ಹೊಸ ಕುಡಿಯೊಂದು... 

2 comments:

  1. ಎಲೆ ಕೊಡವಿಕೊಳ್ಳುವ ಮರವು ನಿರ್ಭಾವೀ ಸಂತ ಮನಸ್ವೀ, ನಾವೋ ಭಾವಗಳ ಉರುಳಿಗೆ ಸಿಕ್ಕ ಕುರಿಗಳು!

    ReplyDelete