Friday, December 20, 2013

ಕ್ರಿಸ್ಮಸ್!ಕ್ರಿಸ್ಮಸ್ ಬಂದಾಗೆಲ್ಲಾ ನೆನಪಾಗುವುದು ವಾಮ್ (ಜಾರ್ಜ್ ಮೈಕಲ್ ಮತ್ತು ಆಂಡ್ರ್ಯೂ ರೆಗ್ಲೀ) ನ ಈ ಹಾಡು...

ಪ್ರತೀ ಯುಗಾದಿ ಹೊಸತನ ತರಲಿ ಅಂತ ನಾವು ಆಶಿಸಿದಂತೆಯೇ ಇದೆಯಲ್ಲವೇ ಈ ಹಾಡಿನ ಜಾಡೂ ? ಕಳೆದ ಕ್ರಿಸ್ಮಸ್ ನಲ್ಲಿ ಪ್ರೇಮ ನಿವೇದಿಸಿದ ಹುಡುಗ ಅದಾಗಲೇ ಮುರಿದು ಬಿದ್ದ ಸಂಬಂಧದ ಬಗ್ಗೆ ಹಾಡುತ್ತಿದ್ದಾನೆ. ವಿರಹಿಯೋರ್ವನ ದಟ್ಟ ಯಾತನೆ ಹಾಗೂ ಹೊಸ ಪ್ರೀತಿ-ಸಂಬಂಧದ ಬಗೆಗಿನ ಕನಸಿನ ಚಿಗುರೂ ಇದರಲ್ಲಿದೆ.
೧೯೮೪ರ ಈ ಹಾಡು ಇಂದಿಗೂ ಒಂದಷ್ಟು ವಿರಹಿಗಳ ರಾಷ್ಟ್ರಗೀತೆ ಆಗಿದ್ದರೆ ಆಶ್ಚರ್ಯವೇನಲ್ಲ. ಯಾವತ್ತೂ ಚಾಲ್ತಿಯಲ್ಲಿರುವ ಕ್ಲಾಸಿಕ್ ಹಾಡುಗಳಲ್ಲಿ ಇದೂ ಒಂದು. My all time fav.
http://www.youtube.com/watch?v=E8gmARGvPlI

No comments:

Post a Comment