Thursday, January 31, 2013

ಬಾಬ್ಲಿಯ ಸುಸ್ತು!

ಬಾಬ್ಲಿ ನಡೆಯುತ್ತಲೇ ಇದ್ದಳು, ಅವಳ ಅನಿಸಿಕೆಯಲ್ಲಿ ಒಂದು ೧೦ ಕಿ.ಮೀ ನಡೆದಿದ್ದಾಳೆ ಅಂತ!. ಅಣ್ಣನ ಹತ್ತಿರ ಸ್ವಲ್ಪ ನಿಲ್ಲೋಣವಾ ಅಥವಾ ಎತ್ತಿಕೋ ಅನ್ನೋಕೆ ನಾಚಿಕೆ ಈ ಗಂಡುಬೀರಿಗೆ! ಸ್ವಲ್ಪ ಹೊತ್ತಾದ ಮೇಲೆ ತಲೆಯೆತ್ತಿ ಅಣ್ಣನ ಮುಖ ನೋಡಿದಳು. ಏನೋ ಯೋಚನೆಯಲ್ಲಿದ್ದ ಅಣ್ಣನಿಗೆ ಬಾಬ್ಲಿ ನೋಡುವುದು ಅರಿವಾಗಿ " ಸುಸ್ತಾಯಿತಾ ಅಮ್ಮ ?" ಎಂದು ಕೇಳಿದರು. ಹೌದು ಎಂಬಂತೆ ತಲೆಯಾಡಿಸಿದಳು ಪೋರಿ. ಅಲ್ಲೇ ಇರುವ ಅಶ್ವಥ ಕಟ್ಟೆಯ ಮೇಲೆ ಕೂರಿಸಿದರು. ಪಾಪದ ಹುಡುಗಿ ಹಾಕಿದ್ದ ಚಪ್ಪಲ್ ತೆಗೆದು ತನ್ನ ಪುಟ್ಟ ಕೈಗಳಿಂದ ತನ್ನ ಕಾಲುಗಳನ್ನು ಒತ್ತಿಕೊಂಡಳು. ಮುಖ, ಪುಟ್ಟ ಕಾಲುಗಳೆರಡೂ ಕೆಂಪಾಗಿದ್ದವು ಟೋಮಾಟೋ ಹಣ್ಣಿನಂತೆ!. ಅಣ್ಣನಿಗೆ ಅಯ್ಯೋ ಅನಿಸಿ ಹತ್ತಿರದ ಗೂಡಗಂಡಿಯಿಂದ ನಿಂಬೆಹುಳಿ ಪೆಪ್ಪರಮಿಂಟ್ ತಂದು ಕೊಟ್ಟರು. ಈಗ ಬಾಬ್ಲಿ ಮುಖ ಹಪ್ಪಳದಂತೆ ಅರಳಿತು! ಸ್ವಲ್ಪ ಹೊತ್ತಿಗೆ ಸುಧಾರಿಸಿಕೊಂಡು ಇಬ್ಬರು ಹೊರಡುವಾಗ ಅಣ್ಣ, " ಬೇಡಮ್ಮ, ನಡೆಯೋದು ನೀನು" ಎಂದು ಮಗಳನ್ನು ಎತ್ತಿಕೊಂಡರು. :) ನಾಚಿಕೆ ಬೆರೆತ ಹೆಮ್ಮೆ, ನಗು ಬಾಬ್ಲಿಯ ಮುಖದಲ್ಲಿ, ಕೈಯಲ್ಲಿ ಅಕ್ಕನಿಗೆ ಅಂತ ಉಳಿಸಿದ ಪೆಪ್ಪರಮಿಂಟ್ !!!

1 comment:

  1. ಹಮ್..ಚಂದ ಬರೀತೀರಿ ಸೌಮ್ಯ....
    ನಮ್ಮ ಪತ್ರಿಕೆಗೂ(ವಿಜಯ ಕರ್ನಾಟಕ) ಬರೀಬಹುದಲ್ಲಾ.....?

    -ಸಹ್ಯಾದ್ರಿ ನಾಗರಾಜ್(sahyadri.nagaraj@gmail.com)

    ReplyDelete