Wednesday, February 29, 2012

ಶತಮಾನಗಳಿಂದ ನೀವು ನೀವೇ ಜೊತೆಯಾಗಿ ನಿಂತೀದ್ದಿರಲ್ಲಾ ? ಎಂದಾದರೂ ಒಬ್ಬರೊಡನೆ ಒಬ್ಬರು ಮಾತನಾಡಿದ್ದೀರಾ ?

ಹೇಳಿ ಕಲ್ಲ ಪ್ರತಿಮೆಗಳೇ, ಏನೇನ ನೋಡಿದಿರಿ ನೀವು
ಇಲ್ಲಿ ರಾಜರ ದರ್ಪ ಕಂಡಿರಾ ? ಇಲ್ಲಾ....ರಾಜ ನರ್ತಕಿಯರ ಗೆಜ್ಜೆಗಳ ಝಣತ್ಕಾರ ಕೇಳಿದಿರಾ ?
ವಿಗ್ರಹ ಛೇಧಕರ ವಿಕಾರ-ಭೀಭತ್ಸ ಮುಖಗಳ ಕಂಡು ಬೆದರಿದಿರಾ ?
ಶತಮಾನಗಳಿಂದ ನೀವು ನೀವೇ ಜೊತೆಯಾಗಿ ನಿಂತೀದ್ದಿರಲ್ಲಾ ?
ಎಂದಾದರೂ ಒಬ್ಬರೊಡನೆ ಒಬ್ಬರು ಮಾತನಾಡಿದ್ದೀರಾ ?
ಅದೋ ಆ ಅಜ್ಜಿ ಬಂದು ನಿಮ್ಮ ಬಳಿ ಗೋಳುಗರೆಯುತ್ತಿಹಳಲ್ಲಾ, ಕೇಳುತ್ತಿದೆಯೇ ನಿಮಗೆ?
ಆ ಕಂದಮ್ಮ ಬಂದು ನಿಮ್ಮ ಮೇಲೆ ಹತ್ತಿ ಆಡುತ್ತಿಹನಲ್ಲಾ, ಕಚುಗುಳಿಯಾಗುತ್ತಿಲ್ಲವೇ ನಿಮಗೆ ?
ದೂರದ ತೋಟದ ಗುಲಾಬಿಯೊಂದು ನಿಮ್ಮ ನೋಡಿ ನಗುತಿಹುದಲ್ಲಾ, ಒಂದಿನಿತೂ ಮುಗುಳುನಗೆಯಿಲ್ಲವೇನು ?
ಯಾತ್ರಿಕರ ಕುತೂಹಲಭರಿತ ನೋಟ ಇಷ್ಟವಾಗುತ್ತಿಲ್ಲವೇನು ?
ಮಾತನಾಡಿ ಓ ಕಲ್ಲ ಪುತ್ಥಳಿಗಳೇ .....
ಯಾವ ಶಿಲ್ಪಿ ಕೆತ್ತಿದ ನಿಮ್ಮನ್ನು, ಯಾವ ರಾಜನ ದರ್ಬಾರಿನ ಕಥೆಗಳು ನೀವು ?
ಕೈ-ಕಾಲು, ಉಗುರು, ಬೆರಳು, ಹಣೆ, ಮುಖ,ಮೂಗು ಎಲ್ಲವೂ ಇದ್ದು
ಓಡಾಡದೇ, ಮಾತಾಡದೇ ಉಳಿದಿಹರಲ್ಲ ?
ಒಂದರೆಗಳಿಗೆ ಜೀವ ಬಂದಿದ್ದರೆ ನಿಮ್ಮನುಭವವನ್ನು ಹಂಚಿಕೊಳ್ಳುತ್ತಿದ್ದೀರೆ ? 

2 comments:

  1. nanage istavaada saalugalu ivu:

    ReplyDelete