Tuesday, July 24, 2012

ಮುಗಿದದ್ದು





ಮನದಾಳದಲ್ಲೆಲ್ಲೋ ಅಪಶ್ರುತಿ, ಇದು ನಾ ಕಂಡ ಕನಸಲ್ಲ
ನೀ ನನ್ನ ಕನಸಿನ ಹುಡುಗ ಅಲ್ಲವೇ ಅಲ್ಲ
ನನ್ನ ಕನಸಿನ ಹುಡುಗ ನನ್ನೆಂದೂ ದೂರ ತಳ್ಳಲಾರ
ನನ್ನ ಪ್ರೀತಿಸುವುದ ಬಿಟ್ಟು ಅವಗೇನೂ ತಿಳಿದಿಲ್ಲ
ಕನಸು, ಮನಸಲ್ಲೂ ಅವ ಬೇರೆಯವರ ನೆನಸಲಾರ
ಇಲ್ಲಿ ನಾ ನಿನ್ನ ಎಲ್ಲರೊಂದಿಗೆ ಹಂಚಿಕೊಂಡಿರುವೆ
ನೀ ಬೇರೆಯವರ ಧ್ಯಾನದಲ್ಲಿದ್ದರೂ ನಿನ್ನ ಪ್ರೀತಿಸಿದೆ
ನಿನ್ನೆಲ್ಲಾ ಕನಸುಗಳಿಗೆ ಜೀವ ತುಂಬಿದೆ
ನನ್ನ ಕನಸುಗಳ ಮರೆತೇ ಬಿಟ್ಟೆ
ಮುದ್ದಿನ ಮುದ್ದೆಯಾದವಳು ತಿರಸ್ಕಾರ, ಒರಟು-ಚುಚ್ಚು ಮಾತ ಸಹಿಸಿದೆ
ನನ್ನ ಮೀರಿ ನನ್ನ ಕೊಟ್ಟೆ, ನಿನ್ನ ನಗುವ ಕಾಣಲು ತಹ ತಹಿಸಿದೆ
ಜೀವಕ್ಕಿಂತ ಅಮೂಲ್ಯ ನೀ ನನಗೆ, ಅದರೆ ನಾ ಏನು ನಿನಗೆ ?
ನನ್ನ ನಿಯಮಗಳು, ನನ್ನತನವ ನಾನೇ ಕೈಯಾರೆ ಅಳಿಸಿದೆ
ಇದೂ ನಾನಲ್ಲ, ನನ್ನ ಅಸ್ತಿತ್ವವ ಕಳಕೊಂಡು ಬಿಟ್ಟಿರುವೆ
ಒಂದೇ ಮಾತು ಜೀವದ ಗೆಳೆಯಾ
ನೀ ಎಂದಿಗೂ ಖುಷಿಯಾಗಿರು
ನಿನ್ನ ಮನವೆಲ್ಲಿ ಸಾಂತ್ವನ ಪಡೆಯುತ್ತದೋ ಅಲ್ಲಿ
ನಿನ್ನ ಪ್ರೀತಿಯ ಪಡೆದದ್ದೇ ನನ್ನ ಪುಣ್ಯ, ನಿನ್ನ ಕಾಳಜಿ ಅಮ್ಮನ ಪ್ರೀತಿಯಾಯ್ತು ಎನಗೆ
ಆದರೆ, ನನಗಿನ್ನೂ ಜಾಸ್ತಿ ಬೇಕಿದೆ ಗೆಳೆಯಾ.....
ಇಷ್ಟು ವರುಷಗಳೂ ನಾ ಕಾದಿರಿಸಿದ ಪ್ರ‍ೀತಿ ಕೊನೆಗೂ ಗೆಲ್ಲಲಿಲ್ಲ,
ನಾ ಮತ್ತೆಂದೂ ಚೇತರಿಸಿಕೊಳ್ಳಲಾಗದಂತೆ ಸೋತು ಹೋದೆ
ದೇವಗೆ ಕರುಣೆಯಿದ್ದಲ್ಲಿ ಈ ಜೀವಂತ ಶವದ ಮೆರವಣಿಗೆಯ ನಿಲ್ಲಿಸಲಿ.........

Tuesday, July 3, 2012

ಬೆಳಕಿನ ಹಾದಿಯದು ಮುಂದೆ...


ಮತ್ತದೋ ಆ ತಿರುವಿನಲಿ ಕಾಣುತ್ತಿದೆ ಬೆಳಕು, ಸಾಗಬೇಕಿದೆ ಮುಂದೆ
ಕಳೆದಿಹುದು ಕತ್ತಲ ಗಲಿಬಿಲಿಯ ತಿರುವಿನ ಹಾದಿ, ಹಿಂತಿರುಗಿ ನೋಡದಿರು ಮತ್ತೆ

Monday, July 2, 2012

Wednesday, June 27, 2012

ಪಪ್ಪ ಮತ್ತು ಪುಟ್ಟ. ನಾ ತೆಗೆದ ಫೋಟೋ, ಇಬ್ಬರ ಫೋಸ್ ನೋಡಿ ಹೇಗಿದೆ ?


ಚಿತ್ರ



ನೀರ ಮೇಲಣ ತಟ್ಟೆ

ತಟ್ಟೆಯೊಂದಿಗೆ ಹೂವು
ಈ ಚಿತ್ರ ಬರೆದವರಾರೋ

Tuesday, June 26, 2012

Sunday, June 3, 2012


ಪುಟ್ಟನ ಡ್ರಾಮಾ !
ಇವತ್ತು ’ಅಂಜದ ಗಂಡು ’ ಸಿನಿಮಾ ನೋಡುತ್ತಾ ಇದ್ವಿ, ಅದೇರಿ ಪೀಸ್ ಪೀಸ್!!! ನನ್ನ ಮಗರಾಯ ಕೂಡಾ ಕೂತು ನೋಡಿದ್ದೇ ನೋಡಿದ್ದು. ಅದ್ರಲ್ಲಿ ರವಿಚಂದ್ರನ್ ಹಳ್ಳಿಗೆ ಹೋಗಿ ರಾಗಿಮುದ್ದೆ ತಿನ್ನುವ ಸೀನ್ ಬರುತ್ತೆ. ಅವನು ಅದನ್ನು ಹಣ್ಣಿನ ಥರಾ ತಿಂದು ಏನು ಉಪ್ಪು ಕಾರ ಇಲ್ಲವಲ್ಲ ಅಂತ ಕೇಳ್ತಾನೆ. ಅದಿಕ್ಕೆ ತೂಗುದೀಪ ಶ್ರ‍ೀನಿವಾಸ್ ಖಾರ ಬೇಕಾ ? ಅಂತ ಕೇಳಿ ಹಸಿ ಮೆಣಸಿನಕಾಯಿ ತಿನ್ನಲು ಕೊಡುತ್ತಾನೆ. ಅದನ್ನು ತಿಂದ ರವಿ ಮುಖ ಹೆಂಗಾಗುತ್ತೆ ಗೊತ್ತಲ್ಲ. ನನ್ನ ಪುಟ್ಟನಿಗೆ ತುಂಬಾ ಖುಶ
ಿಯಾಯ್ತು ಆ ಸೀನ್. ತನ್ನ ಪಪ್ಪನ ಹತ್ತಿರ ಹೇಳಿ ಎರೆಡೆರೆಡು ಸಲ ನೋಡಿದ. ಸಂಜೆ ನಮ್ಮ ಮನೆಗೆ ಬಂದ ಅವನ ರಘು ಮಾಮನಿಗೆ ಅದನ್ನು ಹೇಳಿದ್ದು ಹೀಗೆ:" ರಘು ಮಾಮ, ನಾವು ಫಿಮ್ ನೋಡಿದ್ವಿ, ಅದ್ರಲ್ಲಿ ಅವನು ಚಿಕ್ಕು ತಿಂತಾ ಇರ್ತಾನೆ. ಉಪ್ಪು ಇಲ್ಲ, ಖಾರ ಇಲ್ಲ ಅಂತಾನೆ, ಖಾರ ಬೇಕಾ? ತಿನ್ನು ಅಂತ ಕರಿಬೇಸೊಪ್ಪು ಕೊಡ್ತ್ತಾನೆ. ಅದು ತಿಂದು ಅವನು ಊಹೂಂ.....ಅಂತಾ ಅಳ್ತಾನೆ" ಅಂತ. ರಘುಗೆ ಅರ್ಥಾನೇ ಆಗಿಲ್ಲ ಪಾಪ!
ರವಿಚಂದ್ರನ್ ಅಳೋದು ನನ್ನ ಮಗ ತೋರಿಸಿದ್ದು ಹೀಗೆ! :)b