ವಿಷ್ಣು
ಕೆಲವೊಮ್ಮೆ ಹೀಗಾಗುತ್ತೆ, ನಾವು ಅತಿಯಾಗಿ ಪ್ರೀತಿಸುವವರ ಹೊಲಿಕೆಯೋ, ಅವರ ಛಾಯೆಯೋ ಯಾವುದೋ ಒಂದು ಇನ್ನೊಬ್ಬರಲ್ಲಿ ಕಂಡು ಬಂದು ಅವರನ್ನೂ ಪ್ರೀತಿಸತೊಡಗುತ್ತೇವೆ. ನನ್ನ ವಿಷ್ಣುವರ್ಧನ್ ನನ್ನ ಮನಸ್ಸಲ್ಲಿ ಕೂತ ಬಗೆಯಿದು. ಪ್ರಪಂಚದ ಬಗ್ಗೆ ಕಡಿಮೆ exposure ಇದ್ದ ವರ್ಷಗಳೋ, ಅಥವಾ ಚೆಂದ ಅನಿಸಿದ್ದೆಲ್ಲ ಒಳ್ಳೆಯದು ಎನ್ನುವ ಆ ಮುಗ್ಧ ಬಾಲ್ಯವೋ ಅಂತೂ ಅತೀ ಚಿಕ್ಕ ವಯಸ್ಸಿಗೆ ವಿಷ್ಣುವರ್ಧನ್ ನನ್ನ ಮನಸ್ಸಿನಲ್ಲಿ ಮನೆ ಮಾಡಿದ್ದ. ನನ್ನ ಪರೀಕ್ಷೆಯ ರಟ್ಟಿಗೆ ಅಂಟಿಸಿದ್ದ ಕೈಲಿ ಗುಲಾಬಿ ಹಿಡಿದ ಬಂಧನ ಚಿತ್ರದ ಒಂದು ಚಿತ್ರ ಮತ್ತು ಮಲಯ ಮಾರುತದ ಕ್ಯಾಸೆಟ್ಟಿನಲ್ಲಿ ನೀಲಿ ಬಣ್ಣದ ಹಿನ್ನಲೆಯಲ್ಲಿ ಬಿಳಿ ಜುಬ್ಬಾ, ಪೈಜಾಮ ತೊಟ್ಟು ಹಾಡುತ್ತಿರುವ ಚಿತ್ರ ಬಹುಶ ಎಂದೂ ಮಾಸಲಾರದು. ಹೊಯ್ಸಳ ವಂಶದ ವಿಷ್ಣುವರ್ಧನನ ಬಗ್ಗೆ ಶಾಲೆಯಲ್ಲಿ ಪಾಠ ಬಂದಾಗ ನನ್ನ ಕಲ್ಪನೆಗೆ ಬಂದಿದ್ದು ರಾಜನ ದಿರಿಸು ತೊಟ್ಟ ವಿಷ್ಣುವೇ!
ನಾನು ಪರೀಕ್ಷೆ ರಟ್ಟಿನ ಚಿತ್ರ ಬಿಟ್ಟರೆ ಮತ್ತೆಂದೂ ಪೇಪರ್ನಲ್ಲಿ ಬಂದ ವಿಷ್ಣು ಚಿತ್ರಗಳನ್ನು ಕತ್ತರಿಸಲಿಲ್ಲ, ಅವನ ಬಗ್ಗೆ ಎಂದೂ ಏನೂ ತಿಳಿದುಕೊಳ್ಳಲು ಬಯಸಲಿಲ್ಲ. ಇಂದಿಗೂ ವಿಷ್ಣು ಚಿತ್ರಗಳ ಸಂಖ್ಯೆ, ಹೆಸರುಗಳು ಅದಾವುದೂ ನನಗೆ ಗೊತ್ತಿಲ್ಲ. ಆದರೆ ಬಾಲ್ಯದಲ್ಲಿ ನಾ ನೋಡಿದ್ದು ವಿಷ್ಣು ಚಿತ್ರಗಳೇ ಜಾಸ್ತಿ. ನನ್ನ ಹಾಡು ನನ್ನದು ಕೇಳುವಾಗೆಲ್ಲ ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ ಕೂತ ವಿಷ್ಣು ಕಣ್ಣೆದಿರು ಬಂದು ನಗುತ್ತಾರೆ, ಯೂ ಟ್ಯೂಬಿನಲ್ಲಿ ಹಾಡು ನೋಡುವಾಗ ಮೇಲಿನ ಶೃದ್ಧಾಂಜಲಿ ನನಗೆಂದೂ ಭಾದಿಸುವುದಿಲ್ಲ. ಸತ್ತಾಗ ತುಂಬಾ ಅತ್ತಿದ್ದು ಬಿಟ್ಟರೆ ನಾನೆಂದೂ ವಿಷ್ಣುವನ್ನು ಮಿಸ್ ಮಾಡಿದ್ದೆ ಇಲ್ಲ. ಬೇಕೆಂದಾಗೆಲ್ಲ ಹಾಡು-ಚಲನಚಿತ್ರಗಳಲ್ಲಿ ಬರುವ ವಿಷ್ಣು, ನೂರು ಜನರು ಬಂದರೂ ನೂರು ಜನರು ಹೋದರೂ ನನ್ನ ಜೀವನದ ಒಂದು ಭಾಗ. ಹಾದಿ, ಬೀದಿಗಳಲ್ಲಿ ಅಭಿಮಾನಿ ಸಂಘದವರು ಹಾಕಿರುವ ಚಿತ್ರಗಳಲ್ಲಿ ಕೂತ ವಿಷ್ಣು ನನ್ನ ನೋಡಿ ನಗುತ್ತಾನೆ.
ನಾನು ವಿಷ್ಣು ಅಭಿಮಾನಿಯಲ್ಲ, ಅವನ ಖಾಸಗಿ ವಿಷಯಗಳು, ಅವನ ವರ್ತನೆಗಳು, ಕೊನೆ ಕೊನೆಗೆ ಬಂದ ಚಿತ್ರಗಳು ಯಾವುದೂ ನನಗೆ ಸಂಭಂದಿಸಿದ್ದಲ್ಲ!
ಇವಿಷ್ಟೂ ಶಾರೂಕಿನ ಹೊಸ ಚಿತ್ರ 'ಫ್ಯಾನ್'ನ ಪ್ರೊಮೊಗಾಗಿ ಯಶ್ ರಾಜ್ ಫಿಲಂಸ್ ಅವರು ತೆಗೆದ ವಿಡಿಯೋ 'ತುಮ್ ನಹಿ ಸಂಜೋಗೆ'ಯ ಕಂತುಗಳನ್ನು ನೋಡಿದಾಗ ಅನಿಸಿದ್ದು. ಸಚಿನ್, ಚಾರ್ಲಿ ಚಾಪ್ಲಿನ್, ಮೈಕಲ್ ಜಾಕ್ಸನ್, ಶಾರೂಕ್ ಹಾಗೂ ಅಮಿತಾಬ್ ಅಭಿಮಾನಿಗಳನ್ನು ಮಾತನಾಡಿಸಿ ತೆಗೆದ ವಿಡಿಯೋಗಳು ಇವು. ಯಾರನ್ನೋ ಬದುಕಿನ ಭಾಗವಾಗಿ ಸ್ವೀಕರಿಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ವಿನಾಕಾರಣ ಪ್ರೀತಿಸಿ ಅವರ ನೆನಪಲ್ಲಿ ಬದುಕು ಸವೆಸುವವರ ಕತೆಗಳಿವು, ಯೂ ಟ್ಯೂಬಿನಲ್ಲಿ ದೊರೆಯುತ್ತವೆ, ನೀವೂ ನೋಡಿ!
ಹೌದೇ ಪ್ರೀತಿ ಒಪ್ಪ ಓರಣ
ಅಲ್ಲವೇ ಪ್ರೀತಿ ವಿನಾ ಕಾರಣ
ಜಯಂತ್ ಕಾಯ್ಕಿಣಿ

No comments:
Post a Comment