ಮರಕ್ಕೆ ಅಂಟಿ ಹುಟ್ಟಿ
ಅದರದೇ ಭಾಗವಾಗಿರುವ
ಎಲೆಗಳು ಉದುರಿ ಬೀಳುವಾಗ
ಅತ್ತವೇನು?
ಕಾಲ್ತುಳಿತಕ್ಕೋ, ಕಸಬರಿಕೆ ಕಡ್ಡಿಗಳಿಗೊ
ಸಿಲುಕಿ ಪುಡಿ ಪುಡಿಯಾದಾಗ ?
ಇಲ್ಲ, ಉರಿದು ಬೂದಿಯಾಗುವಾಗ
ಯಾತನೆ ಪಟ್ಟವೇನು?
ಮತ್ತೊಮ್ಮೆ ವಸಂತ ಬಂದು
ಮರದಲ್ಲಿ ಚಿಗುರೊಡೆಯುವ
ಕಾಲಕ್ಕಾಗೆ ಪತನ ಹೊಂದಿವಲ್ಲವೇ?
ತಿಳಿ ಇದರ ಮರ್ಮ
ಇಂದು ಉದುರಿದೆನಾಯ್ತು?
ಎಂದೋ ಬರಬಹುದು ಮತ್ತೆ ವಸಂತ ಬಾಳಿನಲಿ
ಚಿಗುರಬಹುದು ಹೊಸ ಕುಡಿಯೊಂದು...
ಎಲೆ ಕೊಡವಿಕೊಳ್ಳುವ ಮರವು ನಿರ್ಭಾವೀ ಸಂತ ಮನಸ್ವೀ, ನಾವೋ ಭಾವಗಳ ಉರುಳಿಗೆ ಸಿಕ್ಕ ಕುರಿಗಳು!
ReplyDelete:)
Delete