ಮತ್ತಿದೋ ಮಾತೇ
ಬಾಯಿಗಳು, ಬಾಯಿಗಳು ಮತ್ತು ಬಾಯಿಗಳು
ಬಾಯಿಗಳು, ಬಾಯಿಗಳು ಮತ್ತು ಬಾಯಿಗಳು
ಸುತ್ತ ಮುತ್ತ, ಮೇಲೆ ಕೆಳಗೆ ಎಲ್ಲಿ ನೋಡಿದರೂ ಅವೇ
ಆಚೆ ತಿರುಗಿದರೆ ನೂರು ಮಾತು, ಕೂತರೆ ಸಾವಿರ
ತಾಳವಿಲ್ಲದ, ಲಯವಿಲ್ಲದ , ಅರ್ಥವಿಲ್ಲದ ಬರೀ ವ್ಯರ್ಥ ಶಬ್ದಗಳಿವು....
ಶಬ್ದ ಶಬ್ದ ತಾಕಲಾಟದಿ ಗುಡುಗೂ, ಸಿಡಿಲೂ ಮತ್ತೆ ಭೋರ್ಗರೆಯುವ ಹುಚ್ಚು ಮಳೆ!
ಅರೆ ಅರೆ! ತಪ್ಪಿದೆ ಮಾತಲ್ಲ ರೀ ಅವು, ಕೂರಂಬುಗಳು
ರೋಮಗಳಿಲ್ಲ ಮೈಯಲ್ಲಿ ಅವೇ ತುಂಬಿವೆ ದಟ್ಟವಾಗಿ
ಉಸಿರಾಡಿದರೂ ಮಿಸುಕಾಡಿದರೂ ಕೊನೆಗೆ ತೆಗೆಯಲೆತ್ನಿಸಿದರೂ ನೋವು
ಮೌನ ಸಾಮ್ರಾಜ್ಯವೆಲ್ಲಿಹುದು ಕಂಡೀರ ಯಾರಾದರೂ?
ಕಂಡರೆ ತಿಳಿಸಿ, ಈ ಮಾತುಗಳಿಗಲ್ಲಿ ಗುಳೆ ಹೋಗೋಕೆ...
No comments:
Post a Comment