ಜಯಶ್ರೀ ಆಂಟಿ ಮನೆಗೆ ಚುಕ್ಕುಬುಕ್ಕು ಟೀಂ ಹೊರಟಿತ್ತು. ಆದರೆ ಕೊನೆ ಘಳಿಗೆಯಲ್ಲಿ ನನ್ನ ಮೈಸೂರು ಫ್ರೆಂಡ್ಸ್ ಬಂದಿದ್ದರಿಂದ ನಾನು ಹೋಗಲಾಗಲಿಲ್ಲ. ಸಿದ್ ಮತ್ತೆ ರಘು ಹೋಗಿ ಆಂಟಿ ಮಾಡಿದ ಎಲ್ಲವನ್ನೂ ತಿಂದು ಅವರಿಬ್ಬರ ಹತ್ತಿರ ಚೆಂದ ಟೈಮ್ ಸ್ಪೆಂಡ್ ಮಾಡಿ ಬಂದ್ರು, ನನ್ನ ಹೊಟ್ಟೆ ಉರಿಸಿದ್ರು ಕೂಡ. ಆದರೆ ಆಂಟಿ ನನಗೋಸ್ಕರ ಮಾಡಿದ ಊರಿನ ಹಲಸಿನ ತಿಂಡಿ ಪಾರ್ಸೆಲ್ ಮಾಡಿ ಕಳಿಸಿದ್ದಲ್ಲದೆ ನನಗೆ ಅವರ ಈ ಪುಸ್ತಕವನ್ನೂ ಕಳಿಸಿದ್ದರು. ಸರಿ, ಚೆಂದದ ತಿಂಡಿ ತಿನ್ನುತ್ತಾ ಪುಸ್ತಕ ಶುರು ಮಾಡಿದೆ. ಎಲ್ಲಾ ಕಥೆಗಳೂ ಒಂದಕ್ಕಿಂತ ಒಂದು. ಕಣ್ಣೆಲ್ಲಾ ಒದ್ದೆ. ಬರೆದ ರೀತಿಯಂತೂ ತುಂಬಾ ತುಂಬಾ ಆಪ್ತವಾಗಿದೆ. ಪಬ್ಲಿಶ್ ಆದ ವರ್ಷ ಪುಣ್ಯಕ್ಕೆ ೨೦೧೨ ಆಗಿತ್ತು. ಚುಕ್ಕುಬುಕ್ಕುವಲ್ಲಿ ಹಾಕಲೇಬೇಕು ಎಂದು ಅವರ ಹತ್ತಿರ ವಿವರಗಳನ್ನು ಕೇಳಿದೆ, ಕೂಡಲೇ ಎಲ್ಲವನ್ನೂ ಕಳುಹಿಸಿ ಕೊಟ್ಟರು. ನಿಮ್ಮ ವಿಶ್ವಾಸಕ್ಕೆ ನಾನು ಏನು ಹೇಳಲಿ ಗೊತ್ತಾಗ್ತಾ ಇಲ್ಲ. ಥ್ಯಾಂಕ್ಸ್ ಆಂಟಿ....
ಪುಸ್ತಕದ ಎಲ್ಲಾ ಕಥೆಗಳಲ್ಲಿ ಯಾವುದನ್ನು ಉಚಿತ ಭಾಗಕ್ಕೆ ಹಾಕೋದು ಅಂತ ಒದ್ದಾಡಿ ಹೋಗಿದ್ದೆ. ಕಂಬದ ಮೇಲಿನ ಚಿತ್ತಾರ ಅತೀ ಇಷ್ಟ ಆದುದ್ದು, ಅದಕ್ಕೆ ಅದನ್ನೇ ಹಾಕಿದೆ.
ಓದಿ ನೋಡಿ...
No comments:
Post a Comment