Sunday, February 5, 2012

ಅಮ್ಮ

ನನ್ನ ಕಂದ ಹೊಟ್ಟೆಯಲ್ಲಿ ಮಿಸುಗುವಾಗ ನಿನ್ನ ನೆನಪು
ನಾ ಹೀಗೆ ಒದೆಯುವಾಗ ನೀ ಇದೇ ಸುಖ ಪಟ್ಟೆಯೇನು ?
ನನ್ನ ಕಂದನಿಗೆ ಹಾಲೂಡಿಸುವಾಗ ನಿನ್ನ ನೆನಪು
ನಾ ನಿನಗೆ ಕಚ್ಚಿದಾಗ ನೀ ಇದೇ ನೋವು ತಿಂದೆಯೇನು?
ನನ್ನ ಕಂದನಿಗೆ ನೀರೆರೆಯುವಾಗ ನಿನ್ನ ನೆನಪು
ನಾ ಅಳುವಾಗ ನೀ ಅತ್ತೆಯೇನು ?
ನನ್ನ ಕಂದ ನಿದ್ದೆಗೆ ಸತಾಯಿಸುವಾಗ ನಿನ್ನ ನೆನಪು
ನನ್ನ ಹೊತ್ತು ನೀನೂ ರಾತ್ರಿಯೀಡಿ ತಿರುಗಿದೆಯೇನು ?
ನನ್ನ ಕಂದ ನೋವಿಂದ ಅಳುವಾಗ ನಿನ್ನ ನೆನಪು
ನಾ ನೋವು ತಿನ್ನುವಾಗ ನೀನೂ ಇದೇ ಯಾತನೆ ಪಟ್ಟೆಯೇನು ?
ನನ್ನ ಕಂದ ಊಟ ತಿನ್ನದಾಗ ನಿನ್ನ ನೆನಪು
ನಾ ಊಟ ಬಿಟ್ಟಾಗ ನೀನೂ ಅತಂಕ ಪಟ್ಟೆಯೇನು?
ನನ್ನ ಕಂದ ಬೆಳೆದು ನನ್ನಿಂದ ದೂರವಾಗುವ ಹೆದರಿಕೆ ನನಗೆ
ನಾ ನಿನ್ನಿಂದ ದೂರವಾದಾಗ ಮೌನವಾಗಿ ನಿಂತೆಯಲ್ಲ ?
ಇದೇ ಹೆದರಿಕೆ ನಿನಗೂ ಆಗಿತ್ತೇ?
ಅಮ್ಮ ಕ್ಷಮಿಸು ತಿಳಿದೋ-ತಿಳಿಯದೆಯೋ ನಾ ಮಾಡಿದ ತಪ್ಪುಗಳಿಗೆ....

Monday, January 30, 2012


ಹಾಗೇ ಸುಮ್ಮನೇ.....

ಸುಮ್ಮನೇ ಬರೆಯಬೇಕಿನಿಸಿದ್ದು....

೧. ನಗು

ಪುಟ್ಟ ಕಂದಮ್ಮನ ನಗು
ಹೂವಿನ ನಸು ನಗು
ಗಿಡದ ಚಿಗುರಿನ ನಗು
ಎಲ್ಲವೂ ಸೇರಿ ಆಯ್ತೇ ನಿನ್ನ ನಗು???????


೨. ನನ್ನ ಕಂದ

ನನ್ನ ಪುಟಾಣಿ ಕಂದ ಬಾಳಿಗೆ ಬೆಳಕಾಗಿ ಬಂದ
ಸುಂದರ ನಗು, ಸುಂದರ ಕಣ್ಣು ಅಮ್ಮನಿಗೆ ಅವನೇ ಬಾಳ ಕಣ್ಣು
ಅವನಿಗಾರೂ ಇಲ್ಲ ಸರಿಸಾಟಿ, ಏಕೆಂದರೆ
ಅಮ್ಮನಿಗೆ ಜೀವ ಕೊಟ್ಟವನು ಅವನೇ ಅಲ್ಲವೇ ?

೩. ಬದಲಾಗದಿರು

ಕಾಣದ ನಾಳೆಗಳಲ್ಲಿ
ಕಳೆದು ಹೋದ ನಿನ್ನೆಗಳಲ್ಲಿ
ಮುಗಿದುಹೋಗುತ್ತಿರುವ ಇಂದಿನಲ್ಲಿ
ನೀನು ಎಲ್ಲಿರುವೆ ನನ್ನ ಗೆಳೆಯಾ....
ಹೊಸ ಕನಸ ಕಟ್ಟಿ ಕೊಟ್ಟವನು
ಜೇವನ ರಥದಲ್ಲಿ ಸಾಥಿಯಾಗಿರುವವನು
ಬದಲಾಗಬೇಡ ಎಂದೆಂದಿಗೂ ನೀ
ಬದುಕಬೇಕಿನಿಸುವುದಿಲ್ಲ ನೀ ಬದಲಾದಲ್ಲಿ

೪. ಎಲ್ಲಿದ್ದಿರಿ ?

ಕಳೆದು ಹೋದ ನಿನ್ನೆಗಳಲ್ಲಿ ನಿಮಗಾಗಿ ಕಾದಿದ್ದೆ
ನೀವೇಕೆ ಬರಲಿಲ್ಲ ?

Tuesday, January 24, 2012

Sunday, February 27, 2011

Thursday, February 24, 2011

Tuesday, February 15, 2011