ನಿಜವೆನ್ನುವುದು ಯಾವುದು?
ನೀ ಅಂದಿದ್ದು ನಿಜವೇ? ನಾ ತಿಳಿದುಕೊಂಡಿದ್ದೆ?
ಅವರು ಬರೆದಿದ್ದೆ? ಇವರು ಒಪ್ಪಿಕೊಂಡಿದ್ದೆ?
ಸುತ್ತಲಿನ ಕೋಟಿ ಮುಖಗಳಲ್ಲಿ ಅದಾವ ಮುಖವು ನಿಜ?
ಶಿಲೆಯಲ್ಲಿ ಕೆತ್ತಿದ ಮಾತ್ರಕೆ ನಿಜವಾಗುವುದೇನು?
ತಾಳೆಗರಿಗಳಲಿ ಗೀಚಿದ್ದು ಮಾತ್ರ
ನಿಜವೇನು?
ಪ್ರಾಚೀನವಾದುದಕ್ಕೆಲ್ಲ ನಿಜದ ಮುದ್ರಾಧಾರಣೆ ಇದೆಯೇನು?
ಇಲ್ಲಿರುವುದು ನಿಜವೇ? ಹಾಗಾದರೆ ಇಲ್ಲದ್ದು ನಿಜವಲ್ಲವೇ?
ಇಷ್ಟಕ್ಕೂ ನಿಜವನ್ನು ಕಂಡವರೆಷ್ಟು ? ತಿಳಿದವರೆಷ್ಟು?
ಕಂಡದ್ದೂ, ತಿಳಿದದ್ದೂ ನಿಜವೇ ?
No comments:
Post a Comment