ಒಂದು ವಾರದಿಂದ ಗಂಟಲು ಮುಷ್ಕರ ಹೂಡಿದೆ. ನಾನು ಕಾಲ್ ಮಾಡಿದ್ರೆ ನಾನೇ ಅದು ಅಂತ ಯಾರೂ
ನಂಬುತ್ತಿಲ್ಲ. ನನ್ನ ಫ಼್ರೆಂಡ್ಸ್ ಎಲ್ಲರೂ ತಮಾಷೆ ಮಾಡಿ ಮಾಡಿ, ನಾನದಕ್ಕೆ ಮತ್ತೆ
ಮತ್ತೆ ನಕ್ಕು ಇದ್ದ ಸ್ವರವೂ ಬಿದ್ದು ಹೋಗಿದೆ. ನನ್ನ ಮಿತ್ರರೊಬ್ಬರು ಇದೇ ವಾಯ್ಸ್
ಚೆನ್ನಾಗಿದೆ, ಇರಲಿ ಬಿಡು ಅಂತ ಹರಸಿದ್ದೂ ಅಯ್ತು. ವಿದೇಶದಿಂದ ಬಂದ ಗೆಳತಿ ಫೋನ್
ಮಾಡಿದವರು ನನ್ನ ಮಧುರ ? ಕಂಠ ಕೇಳಿ ಗಾಬರಿಯಾಗಿ ಫೋನ್ ಇಟ್ಟೇಬಿಟ್ಟರು. ;) ಹೊಸ
ಸ್ನೇಹಿತರೊಬ್ಬರಿಗೆ ಬೇಜಾರು, ನಾನು ಮಾತನಾಡುತ್ತಿಲ್ಲ ಅಂತ. ಮನೆಯಲ್ಲಿರುವ ಮಕ್ಕಳಿಗೆ (
ನನ್ನ ಮಗ ಮತ್ತು ಅಕ್ಕನ ಇಬ್ಬರು ಮಕ್ಕಳು) ಖುಷಿಯೋ ಖುಷಿ. ಬೇಕಾದೆದ್ದೆಲ್ಲಾ
ಮಾಡುತ್ತಿದ್ದಾರೆ, ನಾನು ಬೈಯುವುದಿಲ್ಲ ಅಂತ. ಇನ್ನು ನನ್ನ ಗಂಡನಿಗೋ ಸದಾ ಚಿಂತೆ, ಇದ್ದ
ಬಿದ್ದ ಮನೆ ಮದ್ದುಗಳನ್ನೆಲ್ಲಾ ಹೇಳಿದ್ರೂ ನಾನು ಯಾವುದನ್ನೂ ಮಾಡುತ್ತಿಲ್ಲ ಅಂತ.
ಅಕ್ಕನಿಂದ ಬೈಸಿಕೊಂಡಿದ್ದೂ ಅಯ್ತು. ಊರಿನಿಂದ ಅಣ್ಣ (ನನ್ನ ತಂದೆಯವರು) ದಿನಕ್ಕೆರಡು ಸಲ
ಫೋನ್ ಮಾಡಿ ತಲೆಬಿಸಿ ಮಾಡಿಕೊಂಡಿದ್ದೂ ಆಯ್ತು!. ನಂಗೋ ಎಲ್ಲದ್ದಕ್ಕೂ ಉದಾಸೀನ! :)
ಸುಮ್ಮನೆ ಶೇರ್ ಮಾಡೋಣ ಅನಿಸಿತು!
No comments:
Post a Comment